ಧಗಧಗನೆ ಹೊತ್ತಿ ಉರಿದ ಬಣವೆ: ಅಪಾರ ನಷ್ಟ

ಸೋಮವಾರ, 7 ಜನವರಿ 2019 (17:47 IST)
ಬೆಂಕಿ ತಗುಲಿ ಸಾವಿರಾರು ರೂಪಾಯಿ ಬೆಲೆ ಬಾಳುವ ಹುಲ್ಲು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕುಕ್ಕಳ್ಳಿಹರ ಗ್ರಾಮದಲ್ಲಿ ಘಟನೆ ನಡೆದಿದೆ.

ಪ್ರವೀನ್ ಎಂಬುವರ ಮನೆಯ ಮುಂದೆ ಹಾಕಿದ್ದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದೆ.  

ಬೆಂಕಿ ಕಂಡ ಕೂಡಲೇ ಹೊರಗೆ ಏಕಾಏಕಿಯಾಗಿ ಗಾಬರಿಗೊಂಡು ಪ್ರವೀನ್ ಮನೆಯವರು ಓಡಿಬಂದಿದ್ದಾರೆ.
ನೋಡು ನೋಡುತ್ತಿದ್ದಂತೆ ಸುಮಾರು ಹನ್ನೊಂದು ಅಡಿ ಎತ್ತರದಲ್ಲಿ ಉರಿಯುತ್ತಿದ್ದ ಬೆಂಕಿ 
ಹುಲ್ಲಿನ ಬಣವೆ ಧಗಧಗನೆ ಉರಿಯುತ್ತಿರುವುದು ಕಂಡು ಗಾಬರಿಗೊಂಡಿದ್ದಾರೆ. 

ಮಾಹಿತಿ ತಿಳಿದು ಬೆಂಕಿ ನಂದಿಸಲು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ