ಸಾಲಕ್ಕಾಗಿ ಮಹಿಳೆಯನ್ನ ಜೀತಕ್ಕೆ ಎಳದೊಯ್ದ ಪ್ರಕರಣ: ಆರೋಪಿಯನ್ನ ಬಿಡುವುದಿಲ್ಲ ಎಂದ ಆಯೋಗ

ಭಾನುವಾರ, 23 ಸೆಪ್ಟಂಬರ್ 2018 (16:59 IST)
ಮಾಡಿದ ಸಾಲಕ್ಕಾಗಿ ಮಹಿಳೆಯನ್ನ ಜೀತಕ್ಕೆ ಎಳದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಸುದ್ದಿಗೋಷ್ಟಿನಡೆಸಿದರು. ಹಣ ವಾಪಸ್ ಕೊಡಲಿಲ್ಲ ಅಂತ ಬಲವಂತವಾಗಿ ಜೀತಕ್ಕೆ ಎಳೆದೊಯ್ದಿದ್ದು ಅಮಾನವೀಯ ಕೃತ್ಯವಾಗಿದೆ. ಅಮಾಯಕ ಮಹಿಳೆ ಮೇಲೆ ದೌರ್ಜನ್ಯ ನಡೆಯುವಾಗ ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಆದರೆ ಅದನ್ನು ಬಿಟ್ಟು ಮಹಿಳೆಯನ್ನು ಕಾಪಾಡಲು ಮುಂದಾಗದಿರುವುದು ದುರಂತ ಎಂದರು.

ಆರೋಪಿಯನ್ನು ಮಹಿಳಾ ಆಯೋಗ ಬಿಡುವುದಿಲ್ಲ. ಉಗ್ರ ಶಿಕ್ಷೆ ಕೊಡಿಸುತ್ತದೆ ಎಂದ ಅವರು, ಆಧುನಿಕ ಸಮಾಜದಲ್ಲಿ ಪೈಶಾಚಿಕವಾಗಿ ನಡೆದಿರುವ ಜೀತ ಪದ್ದತಿ ಇದು. ಜೀತಕ್ಕಾಗಿ 50 ಸಾವಿರ ರೂ.‌ಅನ್ನು ಮುಂಗಡವಾಗಿ ಆರೋಪಿ ಕೊಟ್ಟಿದ್ದಾನೆ. ಬಲಿಷ್ಠರು, ಹಣವಂತರು ನಿರ್ಗತಿಕರ ಮೇಲೆ ನಡೆಸಿರುವ ಕೃತ್ಯ ಇದಾಗಿದೆ. ಆರೋಪಿ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ