ದಾಳಿಂಬೆ ಹಣ್ಣಿನ ಈ ಉಪಯೋಗದ ಬಗ್ಗೆ ನಿಮಗೆ ಗೊತ್ತಿದೆಯೇ?

ಗುರುವಾರ, 20 ಸೆಪ್ಟಂಬರ್ 2018 (09:16 IST)
ಬೆಂಗಳೂರು: ದಾಳಿಂಬೆ ಹಣ್ಣು ಆರೋಗ್ಯಕರ ಹಣ್ಣು ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ ದಾಳಿಂಬೆ ಹಣ್ಣು ಕೆಲವು ಅಪರೂಪದ ರೋಗಗಳಿಗೂ ರಾಮಬಾಣ ಎಂದು ನಿಮಗೆ ಗೊತ್ತಿದೆಯೇ?

ಸ್ತನ ಕ್ಯಾನ್ಸರ್
ಇತ್ತೀಚೆಗೆ ಮಹಿಳೆಯರನ್ನು ಕಾಡುತ್ತಿರುವ ಈ ಮಾರಣಾಂತಿಕ ರೋಗ ಬಾರದಂತೆ ತಡೆಯಲು ದಾಳಿಂಬೆ ಸಹಕಾರಿ. ಇದು ಸ್ತನ ಕ್ಯಾನ್ಸರ್ ಗೆ ಕಾರಣವಾಗುವ ಕೋಶಗಳನ್ನು ನಾಶ ಮಾಡುತ್ತವೆ ಎಂದು ತಜ್ಞರೇ ಕಂಡುಕೊಂಡಿದ್ದಾರೆ.

ರಕ್ತದೊತ್ತಡ
ರಕ್ತದೊತ್ತಡ ಇತ್ತೀಚೆಗಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಪ್ರತಿನಿತ್ಯ ದಾಳಿಂಬೆ ಜ್ಯೂಸ್ ಸೇವನೆಯಿಂದ ಇದನ್ನು ನಿಯಂತ್ರಿಸಬಹುದು.

ಮೆದುಳು
ದಾಳಿಂಬೆ ಹಣ್ಣು ನರದೌರ್ಬಲ್ಯದಿಂದ ರಕ್ಷಣೆ ನೀಡುತ್ತದೆ.  ನಿಯಮಿತವಾಗಿ ಇದನ್ನು ಸೇವಿಸಿದರೆ ನರಮಂಡಲ ಸದೃಢವಾಗುತ್ತದೆ.

ಮೂಗಿನ ರಕ್ತಸ್ರಾವ
ದಾಳಿಂಬೆ ಚಿಗುರೆಲೆಯ ರಸವನ್ನು ಅತ್ತಿಮರದ ಎಲೆಯ ರಸದೊಂದಿಗೆ ಮೂಗಿಗೆ ಬಿಡುವುದರಿಂದ ಮೂಗಿನ ರಕ್ತಸ್ರಾವ ನಿಲ್ಲುವುದು.

ಪಿತ್ತ ನಿವಾರಣೆ
ಪಿತ್ತ ಪ್ರಕೃತಿ ಶರೀರ ಇದ್ದರೆ ದಾಳಿಂಬೆ ಹಣ್ಣಿನ ರಸವನ್ನು ಪ್ರತಿನಿತ್ಯ ಸೇವಿಸಿ. ಇದು ಪಿತ್ತ ಕಡಿಮೆ ಮಾಡುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ