ಚರ್ಚೆಯಿಲ್ಲದೆ ಬಜೆಟ್ ಗೆ ಅಸ್ತು ಎಂದ ಸಮಿತಿ

ಗುರುವಾರ, 14 ಫೆಬ್ರವರಿ 2019 (16:49 IST)
ಬಿಜೆಪಿ ಸದಸ್ಯರ ಪ್ರತಿಭಟನೆಯ ನಡುವೆಯೇ ಮೈತ್ರಿ ಸರಕಾರದ ಬಜೆಟ್ ಯಾವುದೇ ಚರ್ಚೆ ಇಲ್ಲದೇ ಅಂಗೀಕಾರ ಪಡೆದುಕೊಂಡಿತು.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಧರಣಿ ಇಂದೂ ಮುಂದುವರೆದಿದ್ದು ಗದ್ದಲ, ಕೋಲಾಹಲಗಳ ನಡುವೆಯೇ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಹಾಗೂ ಸಾಲಿನ ಬಜೆಟ್ಗೆ ಯಾವುದೇ ಚರ್ಚೆ ಇಲ್ಲದೆ ಸದನ ಒಪ್ಪಿಗೆ ನೀಡಿತು.
ಆಪರೇಷನ್ ಕಮಲ ಆಡಿಯೋ ಹಗರಣ ಎಸ್ಐಟಿ ತನಿಖೆಗೆ ಬೇಡ ಹಾಗೂ ಬಿಜೆಪಿ ಶಾಸಕ ಪ್ರೀತಂಗೌಡ ರವರ ಮನೆಯ ಮೇಲೆ ನಡೆದಿರುವ ದಾಂಧಲೆ ಪ್ರಕರಣವನ್ನು ಖಂಡಿಸಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಧರಣಿ ನಡೆಸಿದರು.

ಸದನದಲ್ಲಿ ಕೋಲಾಹಲದ ವಾತಾವರಣ ರೂಪುಗೊಂಡಿತು. ಗದ್ದಲದ ನಡುವೆಯೇ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಸದನ ದ್ವನಿಮತದಿಂದ ಅಂಗೀಕರಿಸಿತು. ಇದಾದ ನಂತರ ಸಭಾಧ್ಯಕ್ಷರು ಧನವಿನಿಯೋಗ ವಿಧೇಯಕ ಮಂಡಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ  ಧನವಿನಿಯೋಗ ವಿಧೇಯಕ ಮಂಡಿಸಿದರು. ಗದ್ದಲದ ನಡುವೆ ದ್ವನಿ ಮತಕ್ಕೆ ಹಾಕಿದ ಸಭಾಧ್ಯಕ್ಷರು ವಿನಿಯೋಗಕ್ಕೆ ಸದನ ಒಪ್ಪಿಗೆ ನೀಡಿದೆ ಎಂದು ಹೇಳಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ