ಬೆಂಗ್ಳೂರು ಬಗ್ಗೆ ನಾಲಿಗೆ ಹರೀಬಿಟ್ಟ ಸುಗಂಧ್ ಶರ್ಮಾಳನ್ನು ಕೆಲಸದಿಂದ ಕಿತ್ತೆಸೆದ ಕಂಪೆನಿ

Sampriya

ಮಂಗಳವಾರ, 24 ಸೆಪ್ಟಂಬರ್ 2024 (15:10 IST)
Photo Courtesy X
ಬೆಂಗಳೂರು: ಉತ್ತರ ಭಾರತೀಯರು ಬೆಂಗಳೂರಿನಿಂದ ಹೋದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ರೀಲ್ಸ್ ಮಾಡಿದ್ದ ಸುಗಂಧ್ ಶರ್ಮಾ ಅವರನ್ನು ಆಕೆಯ ಸಂಸ್ಥೆ ಕೆಲಸದಿಂದ ತೆಗೆದುಹಾಕಿದೆ.

ಇನ್‌ಸ್ಟಾಗ್ರಾಂ ಇನ್ಸ್‌ಫ್ಲುಯೆನ್ಸರ್‌ ಸುಗಂಧ್ ಶರ್ಮಾ, ಬೆಂಗಳೂರು ಮತ್ತು ಕರ್ನಾಟಕ ಬಗ್ಗೆ ನಾಲಿಗೆ ಹರೀಬಿಟ್ಟ ವಿಡಿಯೋಗೆ ಕನ್ನಡಿಗರು ಭಾರೀ ಆಕ್ರೋಶ ಹೊರಹಾಕಿದ್ದರು. ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಇದೀಗ ಕನ್ನಡಿಗರ ಕ್ಷಮೆ ಕೇಳಿ ವಿಡಿಯೋ ಅಪ್ಲೋಡ್ ಮಾಡಿದರು, ಇದೀಗ ಬೆಂಗಳೂರನ್ನೇ ಬಿಟ್ಟು ಹೋಗುವ ಪರಿಸ್ಥಿತಿ ಸುಗಂಧ್ ಶರ್ಮಾಗೆ ಎದುರಾಗಿದೆ.

ಮೂಲಗಳ ಪ್ರಕಾರ ಫ್ರೀಡಂ ಕಂಪನಿಯಲ್ಲಿ ಸುಗಂಧ ಶರ್ಮ ಕೆಲಸ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸುಗಂಧ್ ಶರ್ಮಾ ವಿಡಿಯೋ ವೈರಲ್ ಆಗಿ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದ ಹಾಗೇ ಆಕೆ ಕೆಲಸ ಮಾಡುತ್ತಿದ್ದ ಕಂಪೆನಿ ಎಚ್ಚೆತ್ತುಕೊಂಡಿದೆ.

ಕನ್ನಡಪರ ಹೋರಾಟಗಾರರ ಪ್ರತಿಭಟನೆ ಬಿಸಿ ಏರುತ್ತಿದ್ದ ಹಾಗೇ ಆಕೆಯನ್ನು ಕಂಪನಿ ಕೆಲಸದಿಂದ ತೆಗೆದುಹಾಕಿದೆ. ಫ್ರೀಡಂ ಕಂಪನಿ ಸುಗಂಧ್‌ ಶರ್ಮಾರನ್ನು ಟರ್ಮಿನೇಟ್‌ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ