ಅತ್ಯಾಚಾರಕ್ಕೊಳಗಾದ ಮಹಿಳೆಯ ತಿಥಿ ಮಾಡಿದ ಪೊಲೀಸರು

ಶನಿವಾರ, 11 ಜನವರಿ 2020 (17:47 IST)

ಪೊಲೀಸರೇ ಮುಂದೆ ನಿಂತು ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ತಿಥಿ ಮಾಡಿ ಮಾದರಿಯಾಗಿದ್ದಾರೆ.
 

ಅನಾಥ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಸಂತ್ರಸ್ತೆಯು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಳು.

ಮಹಿಳೆಯ ಶವ ಕೊಂಡೊಯ್ಯಲು ಯಾರೂ ಮುಂದೆ ಬರಲಿಲ್ಲ. ಹೀಗಾಗಿ ಪೊಲೀಸರೇ ಮಹಿಳೆಯ ಶವದ ಅಂತ್ಯಸಂಸ್ಕಾರ ನಡೆಸಿದ್ದಾರೆ.

ಅಷ್ಟೇ ಅಲ್ಲ, ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ತಿಥಿ ಕಾರ್ಯವನ್ನೂ ಪೊಲೀಸರೇ ಮಾಡಿದ್ದಾರೆ. ಪೊಲೀಸರು ಮಾಡಿರೋ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅಂದ್ಹಾಗೆ ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ