ಎಳನೀರನ್ನು ಮರದಿಂದ ಕೊಯ್ದ ಎಷ್ಟು ದಿನದೊಳಗೆ ಕುಡಿದರೆ ಉತ್ತಮ ಎಂಬುದು ತಿಳಿಬೇಕಾ

ಶನಿವಾರ, 20 ಅಕ್ಟೋಬರ್ 2018 (16:50 IST)
ಬೆಂಗಳೂರು : ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಜನರು ಎಳನೀರು ಕುಡಿಯಲು ಇಷ್ಟಪಡುತ್ತಾರೆ. ಯಾಕೆಂದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಈ ಎಳನೀರಿಗೂ ಒಂದು ಎಕ್ಸ್​ಪೈರಿ ಡೇಟ್ ಇದ್ದು, ಆ ಸಮಯದ ನಂತರ ಎಳನೀರು ಕುಡಿದರೆ ಆರೋಗ್ಯ ಕೇಡುತ್ತದೆಯಂತೆ.


ಹೌದು. ಎಳನೀರನ್ನು ಮರದಿಂದ ಕೊಯ್ದ 15 ದಿನಗಳೊಳಗಾಗಿ ಕುಡಿಯಬೇಕು, ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ಆಹಾರ ತಜ್ಞರು. ಹಳೆಯದಾದ ಎಳನೀರಿನಲ್ಲಿರೋ ಅತ್ಯಮೂಲ್ಯ ಎಲೆಕ್ಟ್ರೋಲೈಟ್ ಗಳು ನಾಶವಾಗಿ ನೀರು ಹುಳಿಯಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ರೈತರ ಬಳಿ ಸೀಸನ್ ಇಲ್ಲದಾಗ ಕಡಿಮೆ ಬೆಲೆಗೆ ಎಳನೀರು ಕೊಳ್ಳುವ ದಲ್ಲಾಳಿಗಳು ಅದನ್ನು ಶೇಖರಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರುಕಟ್ಟೆಗೆ ಬಿಡುಗಡೆ ಮಾಡ್ತಾರೆ. ಇದನ್ನು ಕುಡಿದ ಜನರ ಆರೋಗ್ಯ ವೃದ್ಧಿಸುವ ಬದಲು ಕೆಡುತ್ತದೆ.


ಅದಕ್ಕಾಗಿ ಎಳನೀರನ್ನು ಕುಡಿಯುವಾಗ ಅದು ಹುಳಿಯಾಗಿದ್ದರೆ, ಅದು ಹಳೆಯದು ಎಂದು ತಿಳಿದು ಅದನ್ನು ಎಸೆಯಬೇಕೆ ವಿನಃ ಕುಡಿಯಬಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ