ನಾನಾ ಆದಿಗಳಲ್ಲಿ ವಂಚಿಸುತ್ತಿದ್ದ ಸೈಬರ್ ಖದೀಮರು

ಶುಕ್ರವಾರ, 15 ಅಕ್ಟೋಬರ್ 2021 (21:21 IST)
ನಾನಾ ಆದಿಗಳಲ್ಲಿ ವಂಚಿಸುತ್ತಿದ್ದ ಸೈಬರ್ ಖದೀಮರು ಇದೀಗ ಬ್ಯಾಂಕ್ ಖಾತೆಗೆ ಪಾನ್‍ಕಾರ್ಡ್ ನಂಬರ್‍ಲಿಂಕ್ ಮಾಡುವ ನೆಪಹೇಳಿ ವಂಚಿಸಲು ಪ್ರಾರಂಭಿಸಿದ್ದಾರೆ. 
ಇದೇ ರೀತಿ ಐಪಿಎಸ್ ನಿವೃತ್ತ ಅಧಿಕಾರಿ ಶಂಕರ್ ಬಿದರಿ ಅವರಿಗೆ ಬ್ಯಾಂಕ್ ಖಾತೆಗೆ ಪಾನ್‍ಕಾರ್ಡ್ ನಂಬರ್ ಲಿಂಕ್ ಮಾಡವ ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ 89 ಸಾವಿರ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಆಗ್ನೇಯ ವಿಭಾಗದ ಸಿಇಎನ್ ಪೆÇಲೀಸ್ ಠಾಣೆಯಲ್ಲಿ ಬಿದರಿ ಅವರು ದೂರು ನೀಡಿದ್ದಾರೆ. 
ಅ.11ರಂದು ಎಸ್‍ಬಿಐ ಬ್ಯಾಂಕ್ ಹೆಸರಿನಲ್ಲಿ  ಶಂಕರ್‍ಬಿದರಿ ಅವರಿಗೆ ಸಂದೇಶವೊಂದು ಬಂದಿದೆ. ಅದರಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಪಾನ್ ನಂಬರ್‍ಅಪ್‍ಡೇಟ್ ಮಾಡಬೇಕು. ಒಂದು ವೇಳೆ ಮಾಡದೆ ಇದ್ದರೇ ಖಾತೆ ಸ್ಥಗಿತವಾಗಲಿದೆ ಎಂದು ಉಲ್ಲೇಖಿಸಲಾಗಿತ್ತು.
 ಇದಾದ ಬಳಿಕ ಬಿದರಿ ಅವರ ಮೊಬೈಲ್ ಕರೆ ಮಾಡಿದ ಸೈವರ್ ವಂಚಕರು ತಾವು ಎಸ್‍ಬಿಐ ಸಹಾಯವಾಣಿಯಿಂದ ಎಂದು ಪರಿಚಯಿಸಿಕೊಂಡು ಬ್ಯಾಂಕ್ ಖಾತೆಗೆ ಪಾನ್ ನಂಬರ್‍ಲಿಂಕ್ ಮಾಡಬೇಕಿದೆ. ಅದಕ್ಕಾಗಿ ನಿಮ್ಮ ಮೊಬೈಲ್‍ಗೆ ಬರುವ ಒಟಿಪಿ ನಂಬರ್ ತಿಳಿಸುವಂತೆ ಮನವಿ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಹೆಸರಿನಲ್ಲಿ ಕರೆ ಬಂದಿದ್ದನ್ನು ನಂಬಿದ ಶಂಕರ್‍ಬಿದರಿ ತಮ್ಮ ಮೊಬೈಲ್‍ಗೆ ಬಂದಿದ್ದ ಒಟಿಪಿ ನಂಬರ್ ಹೇಳಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 89 ಸಾವಿರ ರೂ. ಕಡಿತವಾಗಿದೆ ಎಮದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ