ಸರ್ಕಾರದ ಕಾರ್ಯದರ್ಶಿ ಚಿರಂಜೀವ್ ಸಿಂಗ್ ರ ಕೃತಿ "ಯಾವ ಜನ್ಮದ ಮೈತ್ರಿ": ನಗರದಲ್ಲಿ ಸಂವಾದ

ಶುಕ್ರವಾರ, 15 ಅಕ್ಟೋಬರ್ 2021 (20:29 IST)
ಬೆಂಗಳೂರು: ದೂರದ ಪಂಜಾಬ್ ನಲ್ಲಿ ಜನಿಸಿ, ಭಾರತೀಯ ಆಡಳಿತ ಸೇವೆಗೆ ಸೇರಿ ಕರ್ನಾಟಕಕ್ಕೆ ಬಂದು ನೆಲೆಸಿ, ಕನ್ನಡದವರಾಗಿ, ತಮ್ಮ ದಕ್ಷತೆ ಮತ್ತು ಪ್ರಾಮಾಣಿಕತೆಯ ಮೂಲಕ ಜನಪ್ರಿಯ ಅಧಿಕಾರಿ ಜನ ಮನ್ನಣಿ ಗಳಿಸಿದ ರಾಜ್ಯ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಚಿರಂಜೀವ್ ಸಿಂಗ್ ರ ಅನುಭವಗಳ ಕೃತಿ "ಯಾವ ಜನ್ಮದ ಮೈತ್ರಿ" ಯಾಗಿದೆ. ಆಡಳಿತ ಸಂತ ಎಂದೇ ಕರೆಯುತ್ತಿರುವ ಚಿರಂಜೀವ್ ಸಿಂಗ್ ರ ಈ ಕೃತಿಯ ಕುರಿತು ಅಕ್ಟೋಬರ್ 19 ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಜಯ ಚಾಮರಾಜೇಂದ್ರ ರಸ್ತೆಯ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
 
ರಾಜ್ಯದ ನಿವೃತ್ತ ಆರಕ್ಷಕ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕ ಡಾ. ಅಜಯ್ ಕುಮಾರ್ ಸಿಂಗ್ ಸಾರಥ್ಯ ವಹಿಸಲಿದ್ದಾರೆ . 
 
ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಡಾ ಹಂ ಪ ನಾಗರಾಜಯ್ಯ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ಸುಪ್ರಸಿದ್ಧ ರಂಗ ತಂಡದ ಶ್ರೀನಿವಾಸ್ ಜಿ ಕಪ್ಪಣ್ಣ, ಕೃತಿಯ ರಚನಾಕಾರ ಚಿರಂಜೀವ್ ಸಿಂಗ್ ಕೂಡ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಪುಸ್ತಕ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ