ನಿಂಬೆ ರಸ ಮೂಗಿಗೆ ಹಾಕಿ ವ್ಯಕ್ತಿ ಸಾವು

ಗುರುವಾರ, 29 ಏಪ್ರಿಲ್ 2021 (10:31 IST)
ರಾಯಚೂರು : ಮೂಗಿಗೆ ನಿಂಬೆರಸ ಹಾಕಿಕೊಂಡು ಆರೋಗ್ಯವಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಿಂಧನೂರಿನ ನಟರಾಜ ಕಾಲೋನಿಯಲ್ಲಿ ಬುಧವಾರ ನಡೆದಿದೆ.

ಬಸವರಾಜ (43) ಮೃತಪಟ್ಟ ವ್ಯಕ್ತಿ, ಇವರು ನಗರದ ಶರಣಬಸವೇಶ್ವರ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಬೆಳಿಗ್ಗೆ ಆರೋಗ್ಯವಾಗಿಯೇ ಇದ್ದರು, ಆದರೆ ಮೂಗಿನಲ್ಲಿ ನಿಂಬೆ ರಸ ಹಾಕಿಕೊಂಡ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಸಾವನಪ್ಪಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.

ಇತ್ತೀಚಿಗೆ ಕೊರೊನಾದಿಂದ ರಕ್ಷಿಸಿಕೊಳ್ಳಲು  ಮನೆಮದ್ದಾಗಿ ನಿಂಬೆಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಳ್ಳುವಂತೆ ತಿಳಿಸಲಾಗುತ್ತದೆ. ಈ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಇದೀಗ ಈ ಮನೆಮದ್ದಿನಿಂದ ಜೀವ ಉಳಿಸಿಕೊಳ್ಳಲು ಹೋಗಿ ವ್ಯಕ್ತಿಯ ಜೀವ ಬಲಿಯಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ