ಮೊಣಕೈ, ಕಾಲಿನಲ್ಲಿರುವ ಕಪ್ಪು ಕಲೆ ತೊಲಗಿಸಿ ಬೆಳ್ಳಗಾಗಿಸಲು ಇದನ್ನು ಹಚ್ಚಿ
ಸೋಮವಾರ, 22 ಮಾರ್ಚ್ 2021 (06:28 IST)
ಬೆಂಗಳೂರು : ಹೆಚ್ಚಿನವರ ಮೊಣಕೈಕಾಲು ಕಪ್ಪಾಗಿರುತ್ತದೆ. ಇದರಿಂದ ನಿಮಗೆ ಇಷ್ಟವಾದ ಚಿಕ್ಕದಾದ ಬಟ್ಟೆಗಳನ್ನು ಧರಿಸಲು ಆಗುವುದಿಲ್ಲ. ಅಂತವರು ಈ ಕಪ್ಪು ಕಲೆಗಳನ್ನು ನಿವಾರಿಸಿ ಬೆಳ್ಳಗಾಗಿಸಲು ಈ ಮನೆಮದ್ದನ್ನು ಬಳಸಿ.
ಆಲೂಗಡ್ಡೆ ಮತ್ತು ನಿಂಬೆ ಶುಷ್ಕತೆ ಮತ್ತು ಕಪ್ಪು ಬಣ‍್ಣವನ್ನು ತೆಗೆದುಹಾಕಲು ಸಹಕಾರಿ ಹಾಗಾಗಿ 1 ಬೇಯಿಸಿದ ಆಲೂಗಡ್ಡೆಯನ್ನು ಮಿಕ್ಸ್ ಮಾಡಿಕೊಂಡು ಅದಕ್ಕೆ 1 ಚಮಚ ನಿಂಬೆ ರಸ ಸೇರಿಸಿ ಈ ಮಿಶ್ರಣವನ್ನು ಮೊಣಕೈಗೆ ಹಚ್ಚಿ 10 ನಿಮಿಷ ಬಿಟ್ಟು ತಣ‍್ಣೀರಿನಲ್ಲಿ ವಾಶ್ ಮಾಡಿ. ಪ್ರತಿದಿನ ಈ ಪ್ಯಾಕ್ ಹಚ್ಚಿದರೆ ಕಪ್ಪು ಕಲೆ ಮಾಯವಾಗುತ್ತದೆ.