ಸಹೋದ್ಯೋಗಿಗಳ ಕಿರುಕುಳಕ್ಕೆ ಬೇಸತ್ತು ಯುವಕನ ಸಾವು: ಆಕ್ರೋಶ

ಸೋಮವಾರ, 8 ಅಕ್ಟೋಬರ್ 2018 (16:30 IST)
ಸಹೋದ್ಯೋಗಿಗಳ ಕಿರುಕುಳಕ್ಕೆ ಬೇಸತ್ತು ಯುವಕನ ಸಾವು ಪ್ರಕರಣ ಖಂಡಿಸಿ ಪಿಎಸ್ ಆರ್ ಬಟ್ಟೆ ಅಂಗಡಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಹಾಸನದ ಪಿ.ಎಸ್.ಆರ್. ಬಟ್ಟೆ ಅಂಗಡಿ ಮುಚ್ಚಲು ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.  
ಕಳೆದ ಏಳು ವರ್ಷಗಳಿಂದ ಪಿ.ಎಸ್.ಆರ್.ನಲ್ಲಿ ಕೆಲಸ ಮಾಡುತ್ತಿದ್ದ ಸೇವಾರ್ಥ್ (25)ನ ಸಂಸ್ಥೆಯ ಮ್ಯಾನೇಜರ್ ಹಾಲುದೊರೈ, ಸಹಾಯಕ ಮ್ಯಾನೇಜರ್ ಪ್ರದೀಪ್ ಹಾಗೂ ಹಾಸನ ಬ್ರಾಂಚ್ ಮ್ಯಾನೇಜರ್ ಪ್ರಕಾಶ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.
ಯುವಕ ಸೇವಾರ್ಥ ಸಾವಿಗೂ ಮುನ್ನ ಸೆಲ್ಫಿ ಹೇಳಿಕೆ ದಾಖಲು ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕನ್ನಡಿಗನೆಂಬ ಕಾರಣಕ್ಕೆ ವಿನಾಕಾರಣ‌ ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾವಣೆ ಮಾಡಿದ್ದ ಆರೋಪ ಕೇಳಿಬಂದಿದೆ.

ತಮಿಳುನಾಡು ಮೂಲದ ಪಿ.ಎಸ್.ಆರ್. ಬಟ್ಟೆ ಅಂಗಡಿ ಇದಾಗಿದೆ. ಕೆಲವು‌ ದಿನಗಳ ಹಿಂದೆ ಎರಡು ದಿನ ರಜೆ ಮಾಡಿದ್ದಕ್ಕೆ ಹಾಸನದಿಂದ ಮಂಗಳೂರಿಗೆ ಸೇವಾರ್ಥನನ್ನು ವರ್ಗಾವಣೆ ಮಾಡಲಾಗಿತ್ತು. ಇದರಿಂದ ಮನನೊಂದಿದ್ದ ಸೇವಾರ್ಥ್ ಕಿರುಕುಳಕ್ಕೆ ಬೇಸತ್ತು ಸಾವನ್ನಪ್ಪಿದ್ದಾನೆ.

ಯುವಕನ ಸಾವಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಯಿತು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ