ಪ್ರಸಿದ್ಧ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಹೆಗಡೆ ನಿಧನ

ಶನಿವಾರ, 11 ಮೇ 2019 (11:43 IST)
ಶಿರಸಿ : ಪ್ರಖ್ಯಾತ ಯಕ್ಷಗಾನ ಕಲಾವಿದ ನೆಬ್ಬೂರು ನಾರಾಯಣ ಹೆಗಡೆ (83)ಅವರು ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ.




ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹಣಗಾರು ಗ್ರಾಮದ ನಿವಾಸಿ ನೆಬ್ಬೂರು ನಾರಾಯಣ ಭಾಗವತರು ಯಕ್ಷಗಾನದ ಭಾಗವತಿಕೆಯಲ್ಲಿ ಪ್ರಸಿದ್ಧರಾಗಿದ್ದು, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕೃತರಾಗಿದ್ದರು.


ಯಕ್ಷಗಾನದಲ್ಲಿ ಶ್ರೀರಾಮ ನಿರ್ಯಾಣ, ಶ್ರೀಕೃಷ್ಣ ಸಂಧಾನದ ಪದ್ಯಗಳು ಸೇರಿದಂತೆ ಅವರ ಕಂಠದಿಂದ ಹೊರ ಹೊಮ್ಮಿದ ಪದ್ಯಗಳು ನೆಬ್ಬೂರರ ಶೈಲಿಯೆಂದೇ ಪ್ರಸಿದ್ಧಿಯನ್ನು ಪಡೆದಿದ್ದವು. ಭಾಗವತರ ನಿಧನ ಯಕ್ಷ ಲೋಕಕ್ಕೆ ಅಪಾರ ನಷ್ಟವಾಗಿದೆ ಎಂದು ಅವರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ