ನನ್ನ ಸಾಲ ಮನ್ನಾ ಮಾಡಬೇಡಿ ಎಂದು ಸರಕಾರಕ್ಕೆ ಪತ್ರ ಬರೆದ ರೈತ

ಸೋಮವಾರ, 13 ಆಗಸ್ಟ್ 2018 (17:48 IST)
ಸಾಲಮನ್ನಾ ಮಾಡಿದ್ರೆ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತದೆ. ಹಾಗಾಗಿ ನನ್ನ ಸಾಲ ಮನ್ನಾ ಮಾಡೋದು ಬೇಡ ಎಂದು ರೈತನೊಬ್ಬ ಸರಕಾರಕ್ಕೆ ಪತ್ರ ಬರೆದಿದ್ದಾನೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ರೈತನೊಬ್ಬ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಮತ್ತು ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಿದ್ದು, ನನ್ನ ಸಾಲ ಮನ್ನಾ ಮಾಡಬಾರದು ಎಂದು ಕೋರಿದ್ದಾರೆ. ಮೂಡಿಗೆರೆ ತಾಲೂಕಿನ ಕರಗೋಡು ಗ್ರಾಮದ ಅಮರನಾಥ ಸರ್ಕಾರಕ್ಕೆ ಪತ್ರ ಬರೆದ ರೈತ.  ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇತ್ತೀಚಿಗೆ ರೈತರ ಎರಡು ಲಕ್ಷದ ವರೆಗಿನ ಸಾಲ ಮನ್ನಾ ಮಾಡೋದಾಗಿ ಘೋಷಣೆ ಮಾಡಿದ್ರು. ಸಾಲ ಮನ್ನಾ ಘೋಷಣೆ ಹಿನ್ನೆಲೆ ನನ್ನ ಆತ್ಮಸಾಕ್ಷಿಗೆ ನಿಮ್ಮ ಸಾಲ ಮನ್ನಾ ಒಪ್ಪುವುದಿಲ್ಲ. ಹಾಗಾಗಿ ನನಗೆ ಸಾಲ ಮನ್ನಾ ಮಾಡೋದು ಬೇಡ ಎಂದು ಅಮರನಾಥ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ನನಗೆ ಕರಗೋಡು ಗ್ರಾಮದ ಸರ್ವೇ ನಂಬರ್ 8 ರಲ್ಲಿ 11 ಎಕರೆ ಜಮೀನು ಹೊಂದಿದ್ದು, ನಾನು 2016 ರಲ್ಲಿ ಕರ್ನಾಟಕ ಬ್ಯಾಂಕ್ ನಲ್ಲಿ  ನಾಲ್ಕು ಲಕ್ಷ ಸಾಲ ಮಾಡಿದ್ದೇನೆ.  ಆದರೂ ನನ್ನ ಸಾಲ ಮನ್ನಾ ಮಾಡೋದು ಬೇಡ, ಬೇರೆಯ ರೈತರಿಗೆ ಸಾಲ ಮನ್ನಾ ಮಾಡಿರೋದಕ್ಕೆ ನನ್ನ ಅಭ್ಯಂತರವಿಲ್ಲ. ಆದ್ರೆ, ರೈತರ ಬೆಳೆದ ಬೆಳೆಗೆ ವೈಜ್ಞನಿಕ ಬೆಲೆ ನೀಡಿ ರೈತರಿಗೆ ಬೆಂಬಲ ನೀಡಬೇಕು ಎಂದು ಸರ್ಕಾರಕ್ಕೆ ರೈತ ಆಗ್ರಹ ಮಾಡಿದ್ದಾರೆ. ಇನ್ನು ಸಾಲ ಮನ್ನಾ ಬೇಡಾ ಎಂದ ರಾಜ್ಯದ ಮೊದಲ ರೈತರಾಗಿದ್ದಾರೆ ಅಮರನಾಥ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ