ತುಂಬಿ ಹರಿಯುತ್ತಿರುವ ಮಾರ್ಕಾಂಡೇಯ ನದಿ: ಸಾವಿರಾರು ಎಕರೆ ಜಮೀನು ಜಲಾವೃತ

ಮಂಗಳವಾರ, 17 ಜುಲೈ 2018 (16:46 IST)
ಕುಂದಾನಗರಿಯಲ್ಲಿಯೂ ಮಳೆರಾಯ ತನ್ನ ಆರ್ಭಟ ಮುಂದುವರಿಸಿದ್ದಾನೆ. ಹೀಗಾಗಿ ಎಡೆಬಿಡದೆ ಸುರಿಯುತ್ತಿರು ಮಳೆಯಿಂದ ಮಾರ್ಕಾಂಡೇಯ ನದಿ ತುಂಬಿ ಹರಿಯುತ್ತಿದೆ. ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಜಲಾವೃತವಾಗಿದೆ.
ಕುಂದಾನಗರಿ ಬೆಳಗಾವಿ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ.

ಬೆಳಗಾವಿ ನಗರ ಸೇರಿದಂತೆ ಜಿಲ್ಲಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆರಾಯ ತನ್ನ ಸುರಿಯುವಿಕೆಯನ್ನು ಮುಂದುವರೆಸಿದ್ದಾನೆ. ನಿರಂತರ ಮಳೆಯಿಂದಾಗಿ ಗರಿಷ್ಠ ಮಟ್ಟ ಮೀರಿ ಮಾರ್ಕಾಂಡೆಯ ನದಿ ತುಂಬಿ ಹರಿಯುತ್ತಿದೆ. ನದಿಯಿಂದ ಹೆಚ್ಚಾದ ನೀರಿನಿಂದ ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತವಾಗಿದೆ. ಬೆಳಗಾವಿ ತಾಲೂಕಿನ ಕಂಗ್ರಾಂಳಿ ಮತ್ತು ಅಲತಗಾ ಗ್ರಾಮಗಳ ಮಧ್ಯದ ಜಮೀನು ಜಲಾವೃತಗೊಂಡಿದ್ದು, ಬೆಳೆ ಹಾನಿ ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಮುಂಗಾರಿನಲ್ಲಿ ಬಿತ್ತನೆ ಮಾಡಿ ಬೆಳೆ ಬೆಳೆಯುವ ಕನಸು ಹೊತ್ತಿದ್ದ ರೈತ ಕಂಗಾಲಾಗುವಂತಾಗಿದೆ. ಬೆಳಗಾವಿ ನಗರದಲ್ಲೂ ಮಳೆಯ ಅಬ್ಬರದಿಂದ ಅಲ್ಲಲ್ಲಿ ರಸ್ತೆ ಮೇಲೆ ನೀರು ಬಂದು ಅವಾಂತರ ಸೃಷ್ಟಿಯಾಗುತ್ತಿದೆ. ವಾಹನ ಸಂಚಾರ, ಜನಜೀವನ ದುಸ್ತರಗೊಳ್ಳುತ್ತಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ