ಹೋಗೆನಕಲ್​ ಫಾಲ್ಸ್ ವೈಭವ ​

ಸೋಮವಾರ, 11 ಜುಲೈ 2022 (20:48 IST)
ಕಾವೇರಿ ನದಿ ಪಾತ್ರದಲ್ಲಿ ಹೆಚ್ಚಿದ ಹೊರ ಹರಿವಿನಿಂದಾಗಿ ಹನೂರು ತಾಲೂಕಿನ ಹೊಗೇನಕಲ್ ಜಲಪಾತ ಭೋರ್ಗರೆದು ಹರಿಯುತ್ತಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಹೊಗೇನಕಲ್ ಜಲಪಾತ ಹಾಗೂ ಭರಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಈ ಅಪರೂಪದ ದೃಶ್ಯ ಕಾವ್ಯವನ್ನ ಕಣ್ತುಂಬಿಕೊಳ್ಳಲು ಮಳೆಯ ನಡುವೆಯೂ ಜಲಪಾತಗಳತ್ತ ಪ್ರವಾಸಿಗರು ಧಾವಿಸುತ್ತಿದ್ದಾರೆ. ಹಸಿರು ಬೆಟ್ಟದ ನಡುವೆ ಹಾಲು ಹೊಳೆಯಾಗಿ ಹರಿಯುತ್ತಿರುವ ಕಾವೇರಿ ವೈಭವ ನೋಡಲು ಸದ್ಯಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ. ಇಲ್ಲಿನ ಜಲಪಾತವು ನೀರಿನಿಂದ ತುಂಬಿ ತುಳುಕುವ ದೃಶ್ಯ ಎಂಥವರನ್ನೂ ರೋಮಾಂಚನಗೊಳಿಸದೇ ಇರದು. ಹೊಗೇನಕಲ್ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಗಡಿಯಲ್ಲಿದ್ದು, ಕರ್ನಾಟಕದ ಜೀವನದಿ ಎಂದೇ ಗುರುತಿಸಲ್ಪಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ