ಮೇಕೆದಾಟು ವಿವಾದ ದಿನದಿಂದ ದಿನಕ್ಕೆ ವ್ಯಾಪಕ ತಿರುವು
ಮೇಕೆದಾಟು ವಿವಾದ ದಿನದಿಂದ ದಿನಕ್ಕೆ ವ್ಯಾಪಕ ತಿರುವ ಪಡೆಯುತ್ತಿದೆ. ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಕಾಂಗ್ರೇಸ್ ನ್ನ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಕಾಲ್ನಾಡಿಗೆ ಜಾಥಾ ನಡೆಸಿದ್ರು. ಆದ್ರೆ ಈ ಮೇಕೆದಾಟು ಯೋಜನೆಯ ಪರವಾಗಿ ನಟ ಚೇತನ್ ಧ್ವನಿ ಎತ್ತಿದ್ದಾರೆ. ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಚೇತನ್ ರಾಜಕೀಯ ನಾಯಕರ ವಿರುದ್ಧ ಸಿಡಿದೆದ್ದಿದ್ರು. ಎರಡು ತಿಂಗಳ ಹಿಂದೆ ಮೇಕೆದಾಟು ಪರ , ಅಣೆಕಟ್ಟು ವಿರುದ್ಧ ಮೇಧಾ ಪಾಟ್ಕರ್ ಮಾತನಾಡಿದ್ರು. ಕಾರ್ಮಿಕರು, ರೈತರು ಮೇಕೆದಾಟು ಪರ ನಿಂತಿರುವುದು ಒಳ್ಳೆಯದು. ಆದ್ರೆ ಡ್ಯಾಂ ಪ್ರಾಜೆಕ್ಟ್ ನಿಂದ ಸಮಸ್ಯೆ ಆಗಲಿದೆ. ನೀರು ಭಾವನಾತ್ಮಕ ವಿಚಾರವಾಗಿದ್ದು , ಮಹಿಳೆಯರು, ರೈತರು ನೀರನ್ನು ಅವಲಂಬಿಸಿದ್ದಾರೆ. ಆದ್ರೆ ನೀರಿನ ವಿಚಾರ ಇಟ್ಕೊಂಡು ರಾಜಕಾರಣಿಗಳು ಆಟ ಆಡ್ತಿದ್ದಾರೆ. ರಾಜಕಾರಣಿಗಳು ಮೈಲೇಜ್ ತಗೊಳ್ಳುವುದಕ್ಕೆ ಕರ್ನಾಟಕ - ತಮಿಳುನಾಡಿನ ಪರ ವಿರುದ್ಧ ಮಾತನಾಡುತ್ತಾರೆ.ಇನ್ನೂ ಇದೇ ವಿಷಯವಾಗಿ ಸಿಎಂ ಆಲ್ ಪಾರ್ಟಿ ಮೀಟಿಂಗ್ ಕರೆದಿದ್ದಾರೆ. ಆ ಸಭೆಗೆ ಪರಿಸರ ತಜ್ಷರು , ಹೋರಾಟಗಾರರನ್ನ ಕರಿಯಬೇಕು. ಇದರಲ್ಲಿ ಕಿಕ್ ಬ್ಯಾಕ್ ಪ್ಲಾನ್ ನಡೆದಿದೆ. ನೀರಿನ ಉಳಿವಿನ ಬಗ್ಗೆ , ಈ ಹೋರಾಟದ ಬಗ್ಗೆ ನಾವು ಸಿಎಂ ಬಳ್ಳಿ ಮಾತನಾಡುತ್ತೇನೆ ಎಂದು ಚೇತನ್ ಅಸಾಮಾಧಾನ ಹೊರಹಾಕಿದ್ರು