PTCL ಕಾಯ್ದೆ ಹೋರಾಟಕ್ಕೆ ಮಣಿದ ಸರ್ಕಾರ

ಶುಕ್ರವಾರ, 28 ಜುಲೈ 2023 (18:00 IST)
ಗ್ಯಾರಂಟಿಗಳ ಜಾರಿಯಿಂದ ಆದ ಗೊಂದಲಗಳ ಜೊತೆಗೆ PTCL ಕಾಯ್ದೆ ವಿಷಯದಲ್ಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ, ಇದೀಗ ತನ್ನ ತಪ್ಪುಗಳಿಗೆ ತೇಪೆ ಹಚ್ಚಲು ಮುಂದಾಗಿದೆ.ದಲಿತ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸದೇ ಮೌನವಾಗಿದ್ದ ಸರ್ಕಾರ 208 ದಿನಗಳ ನಿರಂತರ ಹೋರಾಟದ ಬಳಿಕ PTCL ಕಾಯ್ದೆಗೆ ತಿದ್ದುಪಡಿ ತಂದಿದೆ. ಕಳೆದ 208 ದಿನಗಳಿಂದ ಫ್ರೀಡಂಪಾರ್ಕ್ ನಲ್ಲಿ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ ಪ್ರತಿಭಟನೆ ನಡೆದಿತ್ತು,ಇದೀಗ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ ಹೋರಾಟಗಾರರಿಗೆ ಶುಭಸುದ್ದಿ ನೀಡಿದೆ. ಇನ್ನು ಸರ್ಕಾರದ ಆದೇಶ ತಿಳಿಯುತ್ತಿದ್ದಂತೆ ಫ್ರೀಡಂಪಾರ್ಕ್ ನಲ್ಲಿ ಹೋರಾಟಗಾರರು ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹಾದೇವಪ್ಪ  ಸರ್ಕಾರ ನಿಮ್ಮ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ,ಸದಾ ನಿಮ್ಮೊಂದಿಗೆ ಇರ್ತೀವೆ ಅಂತಾ ಭರವಸೆ ನೀಡಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ