ಪಕ್ರರಣ ಮುಕ್ತ ತನಿಖೆ ಮಾಡಲು ಸರ್ಕಾರ ಸಿದ್ದವಾಗಿದೆ- ಸಿಎಂ

ಶನಿವಾರ, 26 ನವೆಂಬರ್ 2022 (19:18 IST)
ಚಿಲುಮೆ ಸ್ಕ್ಯಾಮ್ ನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು ವಿಚಾರವಾಗಿ ಸಿಎಂ ಪ್ರತಿಕ್ರಿಯಿಸಿದ್ದು,ಪ್ರಕರಣದ ಮುಕ್ತ ತನಿಖೆ ಮಾಡಿಸಲು ಸರ್ಕಾರ ಮುಕ್ತವಾಗಿದೆ ಹೀಗಾಗಿಯೇ ನಾವು ತನಿಖೆಗೆ ಕೊಟ್ಟಿರೋದು.ಹಲವಾರು ಜನರನ್ನು ಬಂಧನ ಕೂಡಾ ಮಾಡಿದೀವಿ.ಚುನಾವಣಾ ಆಯೋಗದ ತನಿಖೆಯನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.
 
ಇನ್ನೂ ಇದೆ ವೇಳೆ ಕರ್ನಾಟಕದ ಬಸ್ ಗಳಿಗೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಾಟ ವಿಚಾರವಾಗಿ ನಾನು ಈಗಾಗಲೇ‌ ಮಹಾರಾಷ್ಟ್ರ ಸರ್ಕಾರದ ಜತೆ ಮಾತಾಡಿದೀನಿ.ಇವತ್ತು ಗೃಹ ಸಚಿವರು ಮತ್ತು ಡಿಜಿ‌ ಐಜಿಪಿ ಅವರೂ ಅಲ್ಲಿನವರ ಜತೆ ಮಾತಾಡ್ತಾರೆ.ನಮ್ಮ ಬಸ್ ಗಳಿಗೆ ಯಾವುದೇ ಹಾನಿ ಮಾಡಬಾರದು ಅಂತಲೂ ತಿಳಿಸಿದೀವಿ.ಎರಡೂ ರಾಜ್ಯಗಳ ನಡುವೆ ಶಾಂತಿ ಸೌಹಾರ್ದತೆ ಕಾಪಾಡಲು ಹೇಳಿದೀವಿ ಎಂದು ಹೇಳಿದರು.ಅಲ್ಲದೇ ಅಧಿಕಾರಿಗಳ ವಿರುದ್ಧ ತಪ್ಪು ಸಾಬೀತಾರೆ ಕ್ರಮ ತಗೋತೀವಿ ಚುನಾವಣಾ ಆಯೋಗ ರದ್ದಾದ ಓಟರ್ ಕಾರ್ಡ್ ಗಳ ಪರಿಷ್ಕರಣೆ ಮಾಡ್ತಿದೆ.ಅನ್ಯಾಯವಾಗಿ ರದ್ದಾಗಿದ್ರೆ ಸರಿಪಡಿಸಲಾಗುತ್ತದೆ.ಎರಡು ಕಡೆ ಓಟರ್ ಕಾರ್ಡ್ ಇದ್ರೆ ರದ್ದು ಮಾಡಲಾಗುತ್ತದೆ ಎಂದು ಸಿಎಂ ಹೇಳಿದರು.
 
ಅಲ್ಲದೇ ಸುವರ್ಣಸೌಧದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು‌ ಕಿತ್ತೂರು ಚೆನ್ನಮ್ಮ ಪ್ರತಿಮೆಗಳ ನಿರ್ಮಾಣ ವಿಚಾರವಾಗಿ ಈಗಾಗಲೇ ಆದೇಶ ಕೊಟ್ಟಿದ್ದೇವೆ.ಅಧಿವೇಶನದ ಸಂದರ್ಭದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು ಹಾಕ್ತೇವೆ ಎಂದು ಹೇಳಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ