ಸರಕಾರ ಉರುಳುತ್ತಾ? ಉಳಿಯುತ್ತಾ? ಕ್ಲೈಮ್ಯಾಕ್ಸ್ ಏನು?

ಮಂಗಳವಾರ, 16 ಜುಲೈ 2019 (15:55 IST)
ಮೈತ್ರಿ ಸರಕಾರ ಹಾಗೂ ವಿಪಕ್ಷ ನಡುವಿನ ರಾಜಕೀಯ ಕದನ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಜುಲೈ 17 ರಂದು ನಡೆಯಲಿರೋ ವಿಶ್ವಾಸ ಮತದಲ್ಲಿ ಸರಕಾರ ಉರುಳುತ್ತಾ? ಉಳಿಯುತ್ತಾ ಅನ್ನೋ ಲೆಕ್ಕಾಚಾರವೇ ಜೋರಾಗಿ ನಡೆಯುತ್ತಿದೆ.

ಕ್ಲೈಮಾಕ್ಸ್ ಹಂತ ತಲುಪಿರೋ ರಾಜ್ಯದ ರಾಜಕಾರಣದಲ್ಲಿ ಆಗಾಗ್ಗೆ ವಿಚಿತ್ರ ತಿರುವು ಪಡೆದುಕೊಳ್ಳುತ್ತಲೇ ಸಾಗುತ್ತಿದೆ.

ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಯಾರಿಗೆ ಜಯ? ಯಾರಿಗೆ ಸೋಲು? ಎಂಬ ವಿಷಯವೇ ಇದೀಗ ಎಲ್ಲೆಡೆ ಚರ್ಚೆ ಆಗುತ್ತಿದೆ.

ಸಂಕಷ್ಟದ ಸನ್ನಿವೇಶವನ್ನು ದೋಸ್ತಿ ಪಕ್ಷಕ್ಕೆ ಒಡ್ಡಬೇಕು ಅಂತ ಬಿಜೆಪಿ ಯತ್ನ ಮುಂದುವರಿಸಿದೆ. ಈ ನಡುವೆ ಕಠಿಣವಾದ ಸನ್ನಿವೇಶವನ್ನು ಗೆದ್ದು ಬರಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿರೋ ಮುಖ್ಯಮಂತ್ರಿ, ಸಿದ್ದರಾಮಯ್ಯರಿಂದಲೂ ಅತೃಪ್ತ ಮನವೊಲಿಕೆಗೆ ಮುಂದಾಗಿದ್ದಾರೆ.

ಬಿಜೆಪಿ ಕೂಡ ರಣತಂತ್ರ ಹೆಣೆಯುತ್ತಿದ್ದು, ಸಿಎಂ ರಾಜೀನಾಮೆ ಕೊಡಿಸಲು ಇನ್ನಿಲ್ಲದ ಯತ್ನವನ್ನು ತೆರೆಮರೆಯಲ್ಲಿ ಮಾಡಿಸುತ್ತಿದೆ.
ಪೊಲಿಟಿಕಲ್ ಹೈವೋಲ್ಟೇಜ್ ಕ್ಲೈಮ್ಯಾಕ್ಸ್ ಏನಾಗಲಿದೆ ಎಂಬುದು ತೀವ್ರವಾಗಿ ಚರ್ಚೆಯಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ