ಮದುವೆಯಾದ ಮೇಲೆ ಒಂದು ವರ್ಷ ಇಬ್ಬರೇ ಹಾಯಾಗಿ ಕಾಲ ಕಳೆಯುವ ದಂಪತಿಗೆ ಮುಂದೆ ಕೊಂಚ ಬದಲಾವಣೆಗೆ ಒಳಪಡುತ್ತಾರೆ.
ಸಾಮಾನ್ಯವಾಗಿ ಮಗು ಹುಟ್ಟಿದ ಮೇಲೆ ದಂಪತಿಯ ಲೈಂಗಿಕ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಇದರಲ್ಲಿ ಹೆಚ್ಚು ನಿರಾಶೆಗೊಳಗಾಗುವುದು ಪತಿ.
ಪುರುಷರಲ್ಲಿ ಲೈಂಗಿಕ ಬಯಕೆ ಮೊದಲಿನಂತೆಯೇ ಇರಬಹುದು. ಆದರೆ ಮಹಿಳೆಯರ ಜವಾಬ್ಧಾರಿಗಳು ಹೆಚ್ಚುವುದರಿಂದ ಲೈಂಗಿಕ ಜೀವನದ ಬಗ್ಗೆ ಗಮನ ಮತ್ತು ಆಸಕ್ತಿ ಕಡಿಮೆಯಾಗಬಹುದು.
ಇಂತಹ ಸಂದರ್ಭದಲ್ಲಿ ಪತ್ನಿಯ ಮೇಲೆ ಕಂಪ್ಲೆಂಟ್ ಮಾಡುವ ಬದಲು ಪತಿಯಂದಿರು ತಮ್ಮ ಪತ್ನಿಯಂದಿರಿಗೆ ಮಗುವನ್ನು ನೋಡಿಕೊಳ್ಳುವ ವಿಚಾರದಲ್ಲಿ ಸಹಾಯ ಮಾಡುವುದು ಒಳ್ಳೆಯದು. ರಾತ್ರಿ ಮಗು ಎಚ್ಚರವಾದರೆ ಪತ್ನಿಯೇ ನೋಡಿಕೊಳ್ಳಬೇಕೆಂದೇನಿಲ್ಲ. ಪತಿಯೂ ಆ ಕೆಲಸ ಮಾಡಬಹುದು.
ಇದರಿಂದ ಪತ್ನಿಗೂ ಸ್ವಲ್ಪ ವಿಶ್ರಾಂತಿ ದೊರೆಯುತ್ತದೆ. ಇಬ್ಬರೂ ಜತೆಯಾಗಿ ಕೆಲಸ ಮಾಡುವುದರಿಂದ ಪತ್ನಿಯೂ ಸಂತೋಷವಾಗುತ್ತಾಳೆ. ಸುಸ್ತು, ಜವಾಬ್ಧಾರಿ ಹಗುರವಾದರೆ ತಾನಾಗಿಯೇ ಪತ್ನಿ ಮೊದಲಿನಂತೇ ಪತಿಯೊಂದಿಗಿರಬಹುದು.