ಹೆಚ್.ಡಿ.ಡಿ ಹಾಗೂ ಸಿಎಂ ಗೆ ಈ ವಿಚಾರದ ಬಗ್ಗೆ ಎಚ್ಚರವಾಗಿರಿ ಎಂದ ಪ್ರಸನ್ನಾನಂದ ಸ್ವಾಮೀಜಿ

ಮಂಗಳವಾರ, 16 ಜುಲೈ 2019 (13:00 IST)
ಬೆಂಗಳೂರು : ನಾಯಕ ಸಮುದಾಯದ ಕೆ.ಎನ್.ರಾಜಣ್ಣರಂತಹ ನಾಯಕರನ್ನು ತುಳಿಯುವ ಕೆಲಸಕ್ಕೆ ಸರ್ಕಾರ ಕೈ ಹಾಕಬಾರದು ಎಂದು ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ, ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿಗೆ ಖಡಕ್ ಎಚ್ಚರಿಕೆ  ನೀಡಿದ್ದಾರೆ.




ದೇವೇಗೌಡರ ಸೋಲಿಗೆ ಕೆ.ಎನ್.ರಾಜಣ್ಣ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ರಾಜಣ್ಣರನ್ನು ಉಚ್ಛಾಟನೆ ಮಾಡಲು ಸರ್ಕಾರ ತೆರೆಮರೆಯ ಕಸರತ್ತು ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಹಾಗೂ ಸಿಎಂ ಅವರಿಗೆ ನಾಯಕ ಸಮುದಾಯದ ಮತ ಬೇಕು. ಹೀಗಾಗಿ ಕೆ.ಎನ್.ರಾಜಣ್ಣರಂತಹ ನಾಯಕರನ್ನು ತುಳಿಯುವ ಕೆಲಸಕ್ಕೆ ಕೈ ಹಾಕಬಾರದು. ಒಂದು ಸರ್ಕಾರದಲ್ಲಿ ಏನಾದರೂ ಇಂತಹ ಬದಲಾವಣೆಯಾಗುತ್ತದೆ ಎಂಬ ಲಕ್ಷಣಗಳು ಕಂಡು ಬಂದರೆ ನಮ್ಮ ಹೋರಾಟವನ್ನು ನಾವು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ