ಚೌಕಿದಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಂತ ರಾಜ್ಯದ ಗೃಹ ಸಚಿವ ಆರೋಪ ಮಾಡಿದ್ದಾರೆ.
ರಫೆಲ್ ಡೀಲ್ ಗೆ ಸಂಭಂದಿಸಿದ ಕಡತಗಳು ಕಳ್ಳತನವಾಗಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಗೆ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ದಲ್ಲಿ ಎಮ್.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಚೌಕಿದಾರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗತ್ತೆ. ದೇಶದ ಸೂಕ್ಷ್ಮ ಕಡತಗಳನ್ನೆ ಸರಿಯಾಗಿ ರಕ್ಷಣೆ ಮಾಡಲಾಗುತ್ತಿಲ್ಲ.
ದೇಶದಲ್ಲಿ ರಕ್ಷಣೆ ಯಾವ ಸ್ಥಿತಿಗೆ ಇದೆ, ಇದನ್ನು ಮಾಧ್ಯಮದವರೇ ತಿಳಿದುಕೊಳ್ಳಬೇಕು ಎಂದು ಎಮ್.ಬಿ ಪಾಟೀಲ್ ಹೇಳಿದರು.
ಅಯೋದ್ಯೆಯ ಸಂಧಾನ ವಿಚಾರ ಕುರಿತು ಮಾತನಾಡಿದ ಅವರು, ರಾಮ ಮಂದಿರ ವಿಚಾರದ ಕುರಿತು ನಾನು ಮಾಧ್ಯಮದಲ್ಲಿ ನೋಡಿದ್ದೇನೆ.
ಸಂಧಾನದ ಮೂಲಕ ಬಗೆ ಹರಿಸಿಕೊಳ್ಳಲು ತಿಳಿಸಿದ್ದಾರೆ. ಅದರ ಜಜ್ ಮೆಂಟ್ ಕಾಪಿ ಸಂಪೂರ್ಣ ನೋಡಿ ಪಕ್ಷ ನಿರ್ಣಯ ಮಾಡುತ್ತದೆ. ಪಕ್ಷದ ನಿರ್ಣಯ ನೋಡಿ ನನ್ನ ಬೆಂಬಲ್ ಕೂಡಾ ಅದಕ್ಕೆ ಇರುತ್ತದೆ ಎಂದರು.
ಎಚ್.ಡಿ.ರೇವಣ್ಣ ಅವರು ಗಂಡ ಸತ್ತು ತಿಂಗಳಾಗಿಲ್ಲ ಎಂದು ಸುಮಲತಾ ಅವರ ಕುರಿತು ಹಗುರವಾಗಿ ಮಾತನಾಡಿರುವುದಕ್ಕೆ ಅದನ್ನು ನಾನು ಗಮನಿಸಿಲ್ಲ, ಈ ಕುರಿತು ಯಾವುದೇ ಹೇಳಿಕೆ ನೀಡಲ್ಲ ಎಂದ ಗೃಹ ಸಚಿವ ಎಮ್.ಬಿ.ಪಾಟೀಲ್ ಹೇಳಿದರು.