ಸರ್ಕಾರದ ವಿರುದ್ಧ ಅಕ್ಷರ ದಾಸೋಹ ನೌಕರ ಸಂಘದ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕಚೇರಿ ಮುಂದೆ ಬಿಸಿಯೂಟ ಕಾರ್ಯಕರ್ತರ ಹೋರಾಟ ನಡೆಯಿತು. 60 ವರ್ಷದ ಮೇಲ್ಪಟ್ಟ ಬಿಸಿಯೂಟ ಕಾರ್ಯಕರ್ತರ ನಿವೃತ್ತಿ ಆದೇಶ ವಿರುದ್ದ ಧರಣಿ ನಡೆಸಿದರು. 2001-02 ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ವೇಳೆ ವಿದ್ಯಾಭ್ಯಾಸ ಹಾಗೂ ವಯಸ್ಸಿನ ಅರ್ಹತೆ ಮಾತ್ರ ಇತ್ತು. ಅದರಲ್ಲಿ ನಿವೃತ್ತಿ ವಯಸ್ಸಿನ ಕೈಪಿಡಿ ಇರಲಿಲ್ಲ. ನಿವೃತ್ತಿ ಹೆಸರಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡ್ತಿದ್ದಾರೆ. 12,000 ನೌಕರರ ಕೆಲಸವನ್ನು ಯಾವುದೇ ನಿವೃತ್ತಿ ಸೌಲಭ್ಯ ಇಲ್ಲದೆ ತೆಗೆದುಹಾಕಲು ಮುಂದಾಗಿದೆ. ಹೀಗಾಗಿ ಈ ಆದೇಶವನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ರೆ ನೀವು ನಿವೃತ್ತಿ ನಿಗದಿ ಮಾಡಿದ್ರೆ ನೌಕರರಿಗೆ ನಿವೃತ್ತಿ ವೇತನ 1 ಲಕ್ಷ ಕೊಡಬೇಕೆಂದು ಒತ್ತಾಯಿಸಿದರು.