ಪಠ್ಯ ಪುಸ್ತಕ ವಿವಾದ ದಿನಕ್ಕೊಂದು ತೀವ್ರತೆ

ಭಾನುವಾರ, 29 ಮೇ 2022 (19:36 IST)
ಪಠ್ಯ ಪುಸ್ತಕ ವಿವಾದ ದಿನಕ್ಕೊಂದು ತೀವ್ರತೆ ಪಡೆದುಕೊಳ್ತಿದೆ.., ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಲಾಗಿದೆ ಅಂತ ಒಕ್ಕಲಿಗ ಸಂಘ ಹೋರಾಟಕ್ಕೆ ಮುಂದಾಗಿದರೆ, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಲಾಗಿದೆ.. ಇದ್ರ ಜತೆಗೆ ನಾಡಗೀತೆಗೂ ಅವಮಾನ ಮಾಡಲಾಗಿದೆ ಅಂತ ರಾಜ್ಯ ಒಕ್ಕಲಿಗ ಸಂಘ ಆರೋಪಿಸಿದೆ. ಪಠ್ಯ ಪರಿಷ್ಕರಣ‌ ಸಮಿತಿ‌ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ 2017 ರಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನವಾಗುವ ಪೋಸ್ಟ್ ಅನ್ನ ಸಾಮಾಜಿಕ ಜಾಲತಾಣದಲ್ಲಿ‌ ಶೇರ್ ಮಾಡಿದ್ರು. ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಅಂಥವ್ರನ್ನ ಇದೀಗ ಪಠ್ಯ ಪುಸ್ತಕ‌ ಪರಿಷ್ಕರಣಾ ಸಮಿತಿ‌ ಅಧ್ಯಕ್ಷರನ್ನಾಗಿ ಮಾಡಿರೋದು ಎಷ್ಟು‌ ಸರಿ..? ಕುವೆಂಪು ಒಂದು‌ ಜಾತಿ, ಮತ , ಧರ್ಮಕ್ಕೆ‌ ಸೀಮಿತ ಆದವರಲ್ಲ. ಅಂಥವ್ರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ ಕೂಡಲೇ ಅವ್ರ ಕ್ಷಮೆ ಕೇಳಬೇಕು ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡೋ ಎಚ್ಚರಿಕೆಯನ್ನ ನೀಡಿದರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ