ಹತ್ಯೆಯಾದ ಸ್ಥಳದಲ್ಲೇ ಹೊಸ ಬಾಡಿಗೆ ಮನೆ ಪಡೆದಿದ್ದ ಹಂತಕರು ..!
ಬುಧವಾರ, 7 ಡಿಸೆಂಬರ್ 2022 (17:20 IST)
ನಿರಂತರವಾಗಿ ಕಿರುಕುಳ ನೀಡುತ್ತಾ ಹೋದಲ್ಲಿ ಎಂಥಹ ಮನುಷ್ಯನಾದ್ರೂ ಮೃಗವಾಗಿ ಬದಲಾಗಿ ಬಿಡುತ್ತಾನೆ. ಅದಕ್ಕೆ ಒಂದೊಳ್ಳೆ ಉದಾಹರಣೆಯೇ ಈ ಘಟನೆ. ಯಸ್ ಕೆ ಪಿ ಅಗ್ರಹಾರ ಬಳಿ ನಡೆದ ಬ್ರೂಟಲ್ ಮರ್ಡರ್ ಹಿಂದೆ ಅಂತಹದೊಂದು ಕಾರಣವಿದೆ. ಕ್ರೈಂ ಮಾಡದೇ ಇದ್ದವರು ಕೊನೆಗೆ ಭೀಕರವಾಗಿ ಹತ್ಯೆ ನಡೆಸಿಯೇ ಬಿಟ್ಡಿದ್ರು
ಪ್ರೇಮವ್ವ, ಅಕ್ಕಮಹಾದೇವಿ, ಕಿರಣ್ ,ಕಾಶಿನಾಥ್ ಹಾಗು ಚೆನ್ನಪ್ಪ ಇಷ್ಟೂ ಜನ ಅದೊಂದು ಬ್ರೂಟಲ್ ಮರ್ಡರ್ ನ ಆರೋಪಿಗಳು . ಪ್ರಮುಖ ಆರೋಪಿತೆ ಸರೋಜಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪಕ್ಕಾ ಹಳ್ಳಿಗಾಡಿನ ಜನ ಈ ಮಟ್ಟಕ್ಕೆ ಕ್ರೂಯಾಲಿಟಿ ಮೆರೆಯೋದಕ್ಕೆ ಕಾರಣ ಹತ್ಯೆಯಾದ ಮಂಜುನಾಥ ಬಾಳಪ್ಪ ಜಮಖಂಡಿ. ಯಸ್ ಹೆಣ್ಣಿನ ಹಿಂದೆ ಬಿದ್ದವನು ನಡು ರಸ್ತೆಯಲ್ಲಿ ಭೀಕರವಾಗಿ ಹತ್ಯೆಯಾಗಿ ಹೋಗಿದ್ದ. ಡಿಸೆಂಬರ್ ಮೂರನೇ ತಾರೀಕು ನಡೆದ ಘಟನೆ ಈಗ ಸಾಕಷ್ಟು ಟ್ವಿಸ್ಟ್ ಗಳನ್ನ ಪಡೆದುಕೊಂಡಿದೆ.
ಸರೋಜಳ ಗಂಡ ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ. ಇಬ್ಬರು ಮಕ್ಕಳು ಕೂಡ ಇತ್ತು. ಈ ನಡುವೆ ಸರೋಜಾಳಿಗೆ ಪರಿಚಯವಾದನು ಇದೇ ಬಾಳಪ್ಪ ಜಮಖಂಡಿ.. ಪರಿಚಯ ದೈಹಿಕ ಸಂಪರ್ಕದವರೆಗೂ ಮುಟ್ಟಿತ್ತು. ಗುಟ್ಟಾಗಿ ನಡೆಸುತ್ತಿದ್ದ ಆಟ ಕೊನೆಗೂ ಬಯಾಲಾದ ಹಿನ್ನಲೆ ಪತಿ ಸೇರಿ ಸರೋಜಳ ಕುಟುಂಬಸ್ಥರು ಬುದ್ದಿ ಹೇಳಿದ್ರು. ತಾ ಮಾಡಿದ್ದು ತಪ್ಪು ಎಂದರಿತು ಕೊನೆಗೂ ಬಾಳಪ್ಪನ ಸಂಗವನ್ನ ಬಿಟ್ಟಿದ್ದಳು .ಆದ್ರೆ ಬಾಳಪ್ಪ ಈಕೆಯನ್ನ ಬಿಟ್ಟಿರಲಿಲ್ಲ. ಸರೋಜ ಹೋದ ಕಡೆಯೆಲ್ಲ ಫಾಲೋ ಮಾಡಿಕೊಂಡು ಹೋಗ್ತಿದ್ದ. ಇದು ಸಹಜವಾಗಿಯೇ ಸರೋಜಾಳಿಗೆ ಇರಿಟೇಷನ್ ಆಗಿತ್ತು. ಈ ವಿಚಾರದ ಬಗ್ಗೆ ತನ್ನ ಕುಟುಂಬಸ್ಥರಿಗೂ ವಿಚಾರ ತಿಳಿಸಿದ್ದಳು. ಒಂದಷ್ಟು ವಾರ್ನ್ ಮಾಡೋ ಕೆಲಸ ಕೂಡ ಕುಟುಂಬಸ್ಥರಿಂದ ಆಗಿತ್ತು. ಇದರ ನಡುವೆ ಮಂಜುನಾಥನಿಂದ ಬೇಸತ್ತು ಕೆ ಪಿ ಅಗ್ರಹಾರದಲ್ಲಿ ಬಾಡಿಗೆ ಮನೆಯನ್ನ ಪಡೆದಿದ್ದರು. ಅಡ್ವಾನ್ಸ್ ಕೊಟ್ಟು ಕ್ಲೀನಿಂಗ್ ಕೆಲಸ ಕೂಡ ಆಗಿತ್ತು. ಈ ನಡುವೆ ಮತ್ತೆ ಕಾಟ ಕೊಡಲು ಶುರು ಮಾಡಿದ್ದ ಮಂಜುನಾಥ್ . ಅದೇನಾದ್ರು ಆಗ್ಲಿ ಈ ಸಲ ಈತನನ್ನ ಮುಗೀಸಬೇಕು ಅಂದುಕೊಂಡವರು ಸರೋಜಾಳ ಫೋನ್ ನಿಂದ ಮಂಜುನಾಥ್ ನನ್ನ ಬೆಂಗಳೂರಿನ ಮಾಗಡಿ ರಸ್ತೆಗೆ ಬರುವಂತೆ ಹೇಳಿದ್ದಳು. ಪೋನ್ ಕಾಲ್ ನಲ್ಲಿ ಕುಟುಂಬಸ್ಥರ ಧ್ವನಿ ಕೂಡ ಕೇಳಿಸಿದ್ದರಿಂದ , ತನಗೇನಾದ್ರು ಆದ್ರೆ ಮಾಗಡಿ ರಸ್ತೆಗೆ ಬನ್ನ ರಂದು ವಾಟ್ಸಪ್ ನಲ್ಲಿ ತನ್ನ ತಾಯಿಗೆ ಮೆಸೇಜ್ ಹಾಕಿದ್ದ. ನಂತರ ಮೊಬೈಲ್ ಚಾರ್ಜ್ ಮುಗಿದಿದೆ ಎಂಬ ಕಾರಣಕ್ಕೆ ಅಲ್ಲೆ ಇದ್ದ ಮೆಡಿಕಲ್ ಶಾಪ್ ನಲ್ಲಿ ಚಾರ್ಜ್ ಹಾಕಿ ಸಿಗರೇಟ್ ಸೇದುತ್ತಾ ನಿಂತಿದ್ದವನ ಮೇಲೆ ಸರೋಜ ಹಾಗು ಆಕೆಯ ಕುಟುಂಬಸ್ಥರು ಏಕಾಏಕಿ ದಾಳಿ ನಡೆಸಿದ್ದಾರೆ. ಎಲ್ಲಾರೂ ಸೇರಿ ಹಲ್ಲೆ ಮಾಡಬಹುದು ಎಂದು ಮಂಜುನಾಥ್ ಅಂದುಕೊಂಡಿದ್ದ. ಆದ್ರೆ ಹಂತಕರ ಪ್ಲಾನಿಂಗೇ ಬೇರೆಯೇ ಇತ್ತು. ಯಾವಾಗ ಆರೂ ಜನ ಸೇರಿ ಹಲ್ಲೆ ನಡೆಸಿ ನೆಲಕ್ಕೆ ಕೆಡವಿಕೊಂಡ್ರೋ ಮಂಜುನಾಥನಿಗೆ ಹಂತಕರ ಉದ್ದೇಶ ಸ್ಪಷ್ಟವಾಗಿತ್ತು. ಅಷ್ಟೂ ಜನ ಸೇರಿ ಮಂಜುನಾಥನಿಗೆ ಥಳಿಸಿ ಒಟ್ಟು 20 ಬಾರಿ ಕಲ್ಲಿನಿಂದ ಜಜ್ಜಿ ಕೊಂದು ಹಾಕಿದ್ದರು.
ಇನ್ನು ಪ್ರಮುಖ ಆರೋಪಿತೆ ಸರೋಜ ಸಿಗಬೇಕಿದೆ. ಆಕೆಯ ಅಪರಾಧದ ಬಗ್ಗೆ ವಿಚಾರಣೆ ನಡೆಸಬೇಕಿದೆ. ಹೀಗಾಗಿ ಮತ್ತ ಆರೋಪಿಗಳನ್ನ ಕಷ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸೋ ಅಗತ್ಯ ಕೂಡ ಇದೆ. ಸದ್ಯ ಕೆಪಿ ಅಗ್ರಹಾರ ಪೊಲೀಸರು ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಕಷ್ಟಡಿಗೆ ಪಡೆಯೋ ಸಾಧ್ಯತೆ ಇದೆ.