ಸಾವಿರಾರು ಜನರೆದುರು ಜೋರಾಗಿ ಕಿರುಚಾಡಿದ ಮಹಿಳಾ ಜಿಲ್ಲಾಧಿಕಾರಿ: ಕಾರಣ ಗೊತ್ತಾ?

ಗುರುವಾರ, 26 ಜುಲೈ 2018 (17:53 IST)
ಅದು ತರಾಸು ರಂಗಮಂದಿರದ ಸಭಾಂಗಣ, ಹಿರಿಯ ಪೊಲೀಸ್ ಅಧಿಕಾರಿಗಳು, ಮಹಿಳಾ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಸೇರಿದ್ರು, ಈ ವೇಳೆ ಮಹಿಳಾ ಜಿಲ್ಲಾಧಿಕಾರಿ ಇದ್ದಕ್ಕಿದ್ದಂತೆ ಜೋರಾಗಿ ಕಿರುಚೋಕೆ ಶುರು ಮಾಡಿದ್ರು.. ಅಯ್ಯೋ ಅವರಿಗೇನಾಯ್ತಪ್ಪಾ? ಇದ್ಯಾಕೀಗೆ ಕಿರುಚ್ತಿದಾರೆ ಅಂತೀರಾ?  
 
ಕೋಟೆನಾಡು
ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಮಹಿಳೆಯರು ಮತ್ತು ಮಕಳಿಗೆ ಹೆಚ್ಚಿನ ರಕ್ಷಣೆ ನೀಡೋ ಜೊತೆಗೆ, ಅವರ ಸುರಕ್ಷತೆಗಾಗಿ ವೀರ ವನಿತೆ ಒನಕೆ ಓಬವ್ವಳ ಹೆಸರಿನಲ್ಲಿ ಓಬವ್ವ ಪಡೆಯೊಂದನ್ನ ತರಬೇತಿ ನೀಡಿ ಸಜ್ಜುಗೊಳಿಸಿದೆ. ಓಬವ್ವ ಪಡೆ ಯಾವ ರೀತಿ ಕಾರ್ಯಪ್ರವೃತ್ತವಾಗಿದೆ ಅನ್ನೋದರ ಡೆಮಾನ್ ಸ್ಟ್ರೇಷನ್ ಕೊಡೋಕೆ ಅಂತ ರಂಗಮಂದಿರದಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಸಮಾರಂಭವೊಂದನ್ನ ಆಯೋಜನೆ ಮಾಡಿದ್ರು, ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಅವರು, ಜೋರಾಗಿ ಕಿರೋಚೋಕೆ ಶುರು ಮಾಡಿದ್ರು.

ಇದ್ಯಾಕಪ್ಪ ಮೇಡಂ ಅವರು ಹೀಗೆ ಕಿರುಚ್ತಿದ್ದಾರೆ ಅಂತ ಅಚ್ಚರಿ ಪಡುತ್ತಿರುವಾಗಲೇ ಭಾಷಣ ಮುಂದುವರೆಸಿದ ಡಿಸಿ ಮೇಡಂ, ಇಂದು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಜೋರಾಗಿ ಮಾತನಾಡದಂತೆ ಕಟ್ಟುಪಾಡುಗಳನ್ನ ಮಾಡಿದ್ದಾರೆ, ಮನೆಯ ಮರ್ಯಾದೆ ಹೆಸರಿನಲ್ಲಿ ಮಹಿಳೆಯರ ಧನಿಯನ್ನು ಹತ್ತಿಕ್ಕಲಾಗ್ತಿದೆ, ಹೀಗಾಗಿ ಮಹಿಳೆಯರ ಮೌನವನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕ್ರಿಮಿನಲ್ ಗಳು, ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ಎಸಗಿ ತಪ್ಪಿಸಿಕೊಳ್ಳುತ್ತಿದ್ದಾರೆ, ಹೀಗಾಗಿ ಇನ್ನು ಮುಂದೆ ಹೆಣ್ಣು ಮಕ್ಕಳು ಯಾವುದೇ ಅಪಾಯಕ್ಕೆ ಸಿಲುಕಿದಂತ ಸಂದರ್ಭದಲ್ಲಿ ಜೋರು ಧನಿಯಲ್ಲಿ ಕಿರುಚುವ ಮೂಲಕ ಇತರರ ಗಮನವನ್ನು ಸೆಳೆದರೆ, ಕ್ರಿಮಿನಲ್ ಗಳು ಅಲ್ಲಿಂದ ಓಡಿ ಹೋಗ್ತಾರೆ ಎಂದು ಕಿವಿಮಾತು ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ