ವಾಹನ ಸವಾರರ ಕಾರಿನ ಕನಸು ಈಡೇರಿಸುವ ಉದ್ದೇಶಕ್ಕೆ ರತನ್ ಟಾಟಾ ಕೇವಲ 1 ಲಕ್ಷ ರೂಪಾಯಿಗೆ ಈ ಕಾರನ್ನು 2009 ರಲ್ಲಿ ಭಾರತದ ಮಾರುಕಟ್ಟೆಗೆ ತಂದಿದ್ದರು. ಆದರೆ ಈ ವರ್ಷ ಜನವರಿಯಿಂದ ಕೆಲವೊಂದು ಸುರಕ್ಷಾ ಕ್ರಮಗಳು ಜಾರಿಗೆ ಬಂದಿವೆ. ಎಪ್ರಿಲ್‌ನಲ್ಲಿ ಪುನಃ ಇನ್ನಷ್ಟು ಕ್ರಮಗಳು ಜಾರಿಗೆ ಬರಲಿವೆ. ಅಕ್ಟೋಬರ್‌ನಿಂದ ಮತ್ತೆ ಹೊಸ ಸುರಕ್ಷಾ ಕ್ರಮಗಳು ಜಾರಿಗೆ ಬರಲಿವೆ. 2020ರ ಎಪ್ರಿಲ್ 1ರಿಂದ ಬಿಎಸ್-6 ಸಂಪೂರ್ಣವಾಗಿ ಜಾರಿಗೆ ಬರಲಿದೆ.
ಇದರಿಂದ ಎಲ್ಲ ಕಾರುಗಳ ನವೀಕರಣ ಸಾಧ್ಯವಿಲ್ಲ. ಇದಕ್ಕೆ ಅನುಗುಣವಾದ ಉತ್ಪನ್ನ ತರಲು ದೊಡ್ಡ ಮಟ್ಟದ ಹೂಡಿಕೆ ಅಗತ್ಯ ಇರುತ್ತದೆ. ಆದರೆ ಕಂಪೆನಿ ನ್ಯಾನೋ ಸುಧಾರಣೆಗಾಗಿ ಹಣ ಹೂಡುವ ಯಾವುದೇ ಯೋಜನೆ ಹೊಂದಿಲ್ಲ. ಆದ್ದರಿಂದ 2020 ರ ವೇಳೆಗೆ ಸಣ್ಣ ಕಾರಿನ ಉತ್ಪಾದನೆ ರದ್ದಾಗಲಿದೆ ಎಂದು ಕಂಪೆನಿ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.