ಪ್ರಿಡ್ಜ್ ಮುಟ್ಟಿದ ಪುಟಾಣಿ ಕರೆಂಟ್ ಶಾಕ್‌ಗೆ ಬಲಿ..!
ಸೂಪರ್ ಮಾರ್ಕೆಟ್‌ಗೆ ಪೋಷಕರೊಂದಿಗೆ ಹೋದ ಬಾಲಕಿಯೊಬ್ಬಳು ಕರೆಂಟ್ ಶಾಕ್‌ಗೆ ಬಲಿಯಾದ ದಾರುಣ ಘಟನೆ ನತೆಲಂಗಾಣದ ನಿಜಮಾಬಾದ್‌ನಲ್ಲಿ ನಡೆದಿದೆ.ಮೃತ ಬಾಲಕಿಯನ್ನು 4 ವರ್ಷದ ರುಚಿತಾ ಎಂದು ಗುರುತಿಸಲಾಗಿದೆ. ಶಾಪಿಂಗ್‌ನಲ್ಲಿ ತೊಡಗಿದ್ದ ವೇಳೆ ಬಾಲಕಿ ಸಮೀಪದಲ್ಲೇ ಇದ್ದ ರೆಪ್ರಿಜರೇಟರ್ ಬಾಗಿಲು ತೆರೆಯಲು ಹೋಗಿದ್ದಾಳೆ. ಈ ವೇಳೆ ಆಕೆಗೆ ಶಾಕ್ ತಗುಲಿದ್ದು, ಆಕೆ ಫ್ರಿಡ್ಜ್ ಬಾಗಿಲಿನಲ್ಲಿ ನೇತಾಡುತ್ತಿದ್ದಾಳೆ. ಪಕ್ಕದಲ್ಲಿದ್ದ ತಂದೆಗೆ ಈ ವಿಚಾರ ತಿಳಿಯಬೇಕಾದರೆ ಸುಮಾರು 15 ಸೆಕೆಂಡ್‌ಗಳೇ ಕಳೆದಿವೆ. ಅಷ್ಟರಲ್ಲಿ ಬಾಲಕಿ ಪ್ರಾಣ ಪಕ್ಷಿಯೇ ಹಾರಿ ಹೋಗಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.