ರೇವಣ್ಣ ಜಿಲ್ಲೆಯಲ್ಲಿರೋದ್ರಿಂದ ಸಚಿವ ಸ್ಥಾನ ಸಿಕ್ಕಿಲ್ಲ ಎಂದ ಅಧ್ಯಕ್ಷ!
ಶುಕ್ರವಾರ, 1 ಮಾರ್ಚ್ 2019 (14:09 IST)
ಸಚಿವ ರೇವಣ್ಣ ಜಿಲ್ಲೆಯಲ್ಲಿರೋದ್ರಿಂದ ನಮಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಚಿವರಾಗೋ ಸಮಯ ಬಂದಾಗ ಆಗುತ್ತೇನೆ. ಹೀಗಂತ ನೂತನ ಅಧ್ಯಕ್ಷ ಹೇಳಿದ್ದಾರೆ.
ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡುತ್ತಾರೋ ಗೊತ್ತಿಲ್ಲ. ಯಾರಿಗೆ ವೋಟ್ ಹಾಕಿಸು ಅಂತಾರೋ ಅವರಿಗೆ ವೋಟ್ ಹಾಕಿಸ್ತೇನೆ ಎಂದು ನೂತನ ಅಧ್ಯಕ್ಷ ಹೇಳಿದ್ದಾರೆ.
ಕರ್ನಾಟಕ ಗೃಹಮಂಡಳಿ ನೂತನ ಅಧ್ಯಕ್ಷರಾಗಿ ಕೆ.ಎಂ.ಶಿವಲಿಂಗೇಗೌಡ ಅಧಿಕಾರ ಸ್ವೀಕಾರ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಹಾಸನ ಜಿಲ್ಲೆಯಿಂದ ಹೆಚ್.ಡಿ. ದೇವೇಗೌಡರು ಅಥವಾ ಪ್ರಜ್ವಲ್ ಇಬ್ಬರಲ್ಲಿ ಯಾರೂ ಸ್ಪರ್ಧಿಸುತ್ತಾರೆ ಅನ್ನೋದಿನ್ನೂ ಗೊತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ನಾನು ಮಾತಾಡಲ್ಲ. ಯಾರಿಗೆ ವೋಟು ಹಾಕಿಸು ಅಂತಾರೋ ಅವರಿಗೆ ವೋಟು ಹಾಕಿಸುತ್ತೇನೆ ಅಂತ ಕೆ.ಎಂ.ಶಿವಲಿಂಗೇಗೌಡ ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಸರ್ಕಾರದಲ್ಲಿ ಗೃಹಮಂಡಳಿಗೆ ತಮ್ಮನ್ನು ನೇಮಕ ಮಾಡಿದ್ದಕ್ಕೆ ರೇವಣ್ಣ ಸೇರಿದಂತೆ ಮೈತ್ರಿ ಸರ್ಕಾರದ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸುವೆ ಎಂದ ಅವರು, ರೇವಣ್ಣ ಜಿಲ್ಲೆಯಲ್ಲಿರೋದ್ರಿಂದ ನಮಗೆ ಸಚಿವ ಸ್ಥಾನ ಸಿಕ್ಕಿಲ್ಲ.
ಸಚಿವರಾಗೋ ಸಮಯ ಬಂದಾಗ ಆಗುತ್ತೇನೆ. ನಮ್ಮ ಜಿಲ್ಲೆಯಲ್ಲಿ ರೇವಣ್ಣ ಇದ್ದಾರೆ. ಜಿಲ್ಲೆಗೆ ಎರೆಡೆರೆಡು ಸ್ಥಾನ ಕೊಡೋಕೆ ಆಗಲ್ಲ. ನಾನು ಒಕ್ಕಲಿಗನಾಗಿರೋದ್ರಿಂದ ಎಲ್ಲಾ ಸ್ಥಾನಗಳು ಒಕ್ಕಲಿಗರಿಗೆ ಕೊಡೋಕೆ ಸಾಧ್ಯವಿಲ್ಲ. ಬಹುಶಃ ನಾನು ಬೇರೆ ಜಾತಿಗೆ ಸೇರಿದ್ದರೆ ಸಚಿವ ಸ್ಥಾನ ಸಿಕ್ಕುತ್ತಿತ್ತೇನೋ ಅಂತಾನೂ ಶಿವಲಿಂಗೇಗೌಡ ಹೇಳಿದ್ದಾರೆ.