1 % ಸೆಸ್ ಇಳಿಕೆ ಮಾಡಿದೆ ಎಂದ ಸಚಿವ

ಬುಧವಾರ, 15 ಜುಲೈ 2020 (14:40 IST)
ಈ ಮೊದಲು 1.5% ಸೆಸ್ ವಿಧಿಸಲಾಗುತ್ತಿತ್ತು.  ಮನವಿಯ ಮೇಲೆ ಅದನ್ನು 1% ಕ್ಕೆ ಇಳಿಕೆ ಮಾಡಲಾಗಿದೆ ಎಂದು ಸಚಿವರೊಬ್ಬರು ಹೇಳಿದ್ದಾರೆ.

ಎಪಿಎಂಸಿ ಪ್ರಾಂಗಣದಲ್ಲಿ ವ್ಯವರಿಸಿದರೆ ಈ ಮೊದಲು 1.5% ಸೆಸ್ ವಿಧಿಸಲಾಗುತ್ತಿತ್ತು. ವರ್ತಕರ ಮನವಿಯ ಮೇಲೆ ಅದನ್ನು 1% ಕ್ಕೆ ಇಳಿಕೆ ಮಾಡಲಾಗಿದೆ. ಸೆಸ್ ನಿಂದ ಸಂಗ್ರಹಿಸಿದ ಹಣದಿಂದ ಎಪಿಎಂಸಿ ನೌಕರರ ವೇತನ, ಸ್ವಚ್ಚತೆ ಹಾಗೂ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಹಾವೇರಿಯ ಬ್ಯಾಡಗಿಯಲ್ಲಿ ಮಾತನಾಡಿದ ಸಚಿವರು, ಬ್ಯಾಡಗಿಯಲ್ಲಿರುವ ಅಂತರಾಷ್ಟ್ರೀಯ ಎಪಿಎಂಸಿ ಮಾರುಕಟ್ಟೆಯ ಮೂಲ ಸೌಕರ್ಯ ಅಭಿವೃದ್ಧಿಗೆ 10 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೆ ಟೆಂಡರ್ ಪಾಸ್ ಮಾಡಲಾಗಿದೆ. ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಜಾಗ ನೀಡಿದರೆ ಸಹಕಾರ ಇಲಾಖೆಯಿಂದ ನಿರ್ಮಿಸಲಾಗುವುದು ಎಂದರು.

ಬ್ಯಾಡಗಿ ಮಾರುಕಟ್ಟೆಯಿಂದ  ಮೆಣಸಿನಕಾಯಿ ಮಾತ್ರವಲ್ಲದೆ ಅದರ ಉಪ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದು, ಆ ಉತ್ಪನ್ನಗಳ ಗುಣಧರ್ಮಗಳನ್ನು ಪ್ರಾಯೋಗಿಕವಾಗಿ ದೃಢೀಕರಿಸಲು ಸುಸಜ್ಜಿತ ಪ್ರಯೋಗಾಲಯವನ್ನು 4 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಸರ್ಕಾರದಿಂದ ಮಂಜೂರಾತಿ ಮಾಡಿರುವುದಾಗಿ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ