ಬೈಕ್ ನಲ್ಲಿ ಬಂದು ಹಣ ಎಗರಿಸಿದ ಖದೀಮರು

ಶುಕ್ರವಾರ, 30 ನವೆಂಬರ್ 2018 (13:54 IST)
ಗಮನ ಬೇರೆಡೆ ಸೆಳೆದು ಮೂರುವರೆ ಲಕ್ಷ ರೂಪಾಯಿ ಹಣ ಕಳ್ಳತನ ಮಾಡಿದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ನಗರದ ಎ.ಪಿ.ಎಂ.ಸಿ. ಮಾರುಕಟ್ಟೆ ಬಳಿ ಘಟನೆ ನಡೆದಿದೆ.

ರತ್ನಮ್ಮ ಹಾಗೂ ಜಯರಾಮಯ್ಯ ದಂಪತಿಯ ಹಣ ಇದಾಗಿದ್ದು, ಗಮನ ಬೇರೆಡೆ ಸೆಳೆದು ಮೂರುವರೆ ಲಕ್ಷ ರೂಪಾಯಿ ಹಣ ದೋಚಲಾಗಿದೆ.

ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ ನಡೆದಿದ್ದು, ಕೆನರಾ ಬ್ಯಾಂಕ್ ನಲ್ಲಿ ಹಣ ಪಡೆದು ಮಗನ ಅಂಗಡಿ ಬಳಿ ರತ್ನಮ್ಮ ತೆರಳಿದ್ದರು. ಮಗನ ಮೆಡಿಕಲ್ ಶಾಪ್ ಬಳಿಯೆ ಘಟನೆ ನಡೆದಿದೆ.

ಚಿಕ್ಕಬಳ್ಳಾಫುರ ನಗರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದ್ದು, ಸಿಸಿ ಟಿವಿಯಲ್ಲಿ ಕಳ್ಳತನ ವಿಡಿಯೋ ಸೆರೆಯಾಗಿದೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ