ನಗರದಲ್ಲಿ ಹೆಚ್ಚಾಗುತ್ತಿದೆ ಬಾಲತಾಯಂದಿರ ನಂಬರ್

ಬುಧವಾರ, 9 ಆಗಸ್ಟ್ 2023 (16:23 IST)
೨೦೨೨ರಲ್ಲಿ ಬಾಲತಾಯಂದಿರ ಸಂಖ್ಯೆ ಹೆಚ್ಚಾಗಿದೆ.೩೦ ಜಿಲ್ಲೆಗಳ ಪೈಕಿ ಬೆಂಗಳೂರಿನಲ್ಲೇ ಹೆಚ್ಚು ಪ್ರಕರಣ ದಾಖಲಾಗಿದೆ. ಆರ್ ಟಿಎಗೆ ಆರೋಗ್ಯ, ಕುಟುಂಬ ಇಲಾಖೆ ನಿರ್ದೇಶನಾಲಯದಿಂದ‌ ಮಾಹಿತಿ ನೀಡಿದೆ.
 
ಕೋವಿಡ್ ನಿಂದ ಈ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನಿರ್ದೇಶಕಿ ಎಂ.ಇಂದುಮತಿ ಮಾಹಿತಿ ನೀಡಿದ್ದು,ಬೆಂಗಳೂರು ನಗರದಲ್ಲಿ ೨೦೨೦ರಲ್ಲಿ ೧೭೯೪ ಬಾಲತಾಯಂದಿರ ಸಂಖ್ಯೆ ದಾಖಲಾಗಿತ್ತು.ಇನ್ನ ೨೦೨೨ರಲ್ಲಿ ೨೧೩೭ ಬಾಲತಾಯಂದಿರ ಸಂಖ್ಯೆ ಹೆಚ್ಚಾಗಿದೆ.೨೦೨೦ ರಿಂದ ೨೦೨೩ರವರೆಗೂ ೪೫,೫೫೭ ಬಾಲತಾಯಂದಿರ ಸಂಖ್ಯೆ ದಾಖಲಾಗಿದೆ.ಇನ್ನ ಬೆಂಗಳೂರು ನಗರದಲ್ಲೇ ೬,೨೦೭ ಬಾಲತಾಯಂದಿರ ಸಂಖ್ಯೆ ದಾಖಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ