ಅಂದು ಗುರು ಇಂದು ಶಿಷ್ಯ,ಒಂದೇ ಟೀಂ ಇಬ್ಬರ ಮರ್ಡರ್

ಶನಿವಾರ, 5 ಆಗಸ್ಟ್ 2023 (13:07 IST)
ರಿಪಬ್ಲಿಕ್ ಆಫ್ ಸೌಥ್ ಪಾರುಪತ್ಯಕ್ಕೆ ಪೈಪೋಟಿ ನಡೆಸಿದ್ದ ವಿಲ್ಸನ್ ಗಾರ್ಡನ್ ನಾಗ ಹಾಗೂ ಶಾಂತಿನಗರ ಲಿಂಗ 
ನಡುವೆ ನಡರದಿದ್ದ ವಾರ್ ನಲ್ಲಿ ಲಿಂಗ್ ಮರ್ಡರ್ ಆಗಿದ್ದ, 2019ರ ಕೊರೊನ ಲಾಕ್ ಡೌನ್ ನಲ್ಲಿ ಹಾಸನದ ಹಿರಿಸಾವೆಯ ಫಾರ್‌ಮ್ ಹೌಸ್ ನಲ್ಲಿ ಬೆಚ್ಚಗೆ ಮಲಗಿದ್ದ ಲಿಂಗನ ಮರ್ಡರ್ ಗೆ ನಾಗ ಕಳುಹಿಸಿದ್ದು ಇದೇ ಡಬಲ್ ಮೀಟರ್ ಮೋಹನ್,ನಂಜಪ್ಪ ,ಕಣ್ಣನ್,ಕುಮಾರ್, ಪ್ರದೀಪ ಗ್ರೇಸ್ ವಾಲ್ಟರ್, ಸುನೀಲ್ ಸೇರಿದಂತೆ  16 ಜನರ‌ ಟೀಮ್ ಲಿಂಗನ ಹತ್ಯೆ ನಡೆಸಿದ್ರು. ಇನ್ನೂ ಗುರು ಲಿಂಗನ ಹತ್ಯೆಯ ಪ್ರತಿಕಾರಕ್ಕೆ‌ ಕಾದಿದ್ದ ಸಿದ್ದಾಪುರ ಮಹೇಶ ನಾಗನ ಅತ್ಯಾಪ್ತ ಪೈನಾಷಿಯಾರ್ ಮದನನ ಕೊಲೆ‌ಮಾಡಿದ್ದ. ಇದು ನಾಗನನ್ನ ರೊಚ್ಚಿಗೇಳುವಂತೆ ಮಾಡಿತ್ತು. ಸದ್ಯ ಅದೇ ಕಾರಣಕ್ಕೆ ಜೈಲಿನಿಂದ ಹೊರ ಬರ್ತಿದ್ದಂತೆ‌ ನಾಗ ಮತ್ತದೇ ಲಿಂಗ ಮರ್ಡರ್ ಕೇಸ್ ನಲ್ಲಿದ್ದ ಟೀಮ್ ನಿಂದಲೇ ಮಹೇಶನ ಕೊಲೆ‌ಮಾಡಿದ್ದಾನೆ. 
 
ಗ್ರೇಸ್ ವಾಲ್ಟನ್, ಸುನೀಲ್, ಕಣ್ಣನ್ ಪಾಪ ಸೇರಿದಂತೆ ಹಲವು ರೌಡಿಗಳು ಸೇರಿ ಮಹೇಶನ್ನ ಭೀಕರವಾಗಿ ಹತ್ಯೆ ನಡೆಸಿದ್ದಾರೆ. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು. ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್ ಹಾಗೂ ಸುನೀಲ್ ಹಾಗೂ ಮತ್ತಿತರ ಮೇಲೆ ಎಫ್ ಐ ಆರ್ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ