ದತ್ತಾತ್ರೇಯ ಹುಂಡಿಗೆ ಹರಿದು ಬಂದ ಕಾಣಿಕೆ ಹೊಳೆ

ಸೋಮವಾರ, 21 ಆಗಸ್ಟ್ 2023 (12:04 IST)
ಕಲಬುರಗಿ : ಜಿಲ್ಲೆಯ ಧಾರ್ಮಿಕ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದ ಹುಂಡಿಗೆ ಭಕ್ತರಿಂದ ಲಕ್ಷಾಂತರ ರೂ. ಕಾಣಿಕೆ ಹಾಗೂ ಚಿನ್ನಾಭರಣ ಹರಿದು ಬಂದಿದೆ.

ಕಾಣಿಕೆಯನ್ನು ಅಧಿಕಾರಿಗಳು ಲೆಕ್ಕ ಮಾಡಿದ್ದಾರೆ. ಈ ವೇಳೆ 97,10,152 ರೂ. ನಗದು ಹಣವನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ. 26 ಗ್ರಾಂ ಚಿನ್ನ ಹಾಗೂ 500 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಹಶೀಲ್ದಾರ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಗಿದೆ. ಶಕ್ತಿ ಯೋಜನೆ ಜಾರಿ ಬಳಿಕ ಮೊದಲ ಬಾರಿಗೆ ಹುಂಡಿ ಹಣ ಎಣಿಕೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಮಾಡಿದೆ. ಯೋಜನೆ ಜಾರಿಯಾದ ಬಳಿಕ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಆಗಿತ್ತು. ಇದರ ಪರಿಣಾಮ ಭಾರೀ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ