ಪ್ರವಾಸಿಗರೇ ಕೆಆರ್ಎಸ್ ಬೃಂದಾವನಕ್ಕೆ ಹೋಗುವ ಮುನ್ನ ಎಚ್ಚರ..!

ಮಂಗಳವಾರ, 22 ಆಗಸ್ಟ್ 2023 (12:51 IST)
ಮಂಡ್ಯ : ಕೆಆರ್ಎಸ್ ಉತ್ತರ ಬೃಂದಾವನದಲ್ಲಿ ಹುಚ್ಚು ನಾಯಿ ದಾಳಿ ನಡೆಸಿ ಐದು ಮಂದಿ ಪ್ರವಾಸಿಗರು ಗಾಯಗೊಂಡಿರುವ ಘಟನೆ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೆಆರ್ಎಸ್ ಬೃಂದಾವನಕ್ಕೆ ಪ್ರವಾಸಿಗರು ಆಗಮಿಸಿದ್ದರು. ಉತ್ತರ ಬೃಂದಾವನದಲ್ಲಿ ಕಳೆದ ರಾತ್ರಿ ಹುಚ್ಚು ನಾಯಿ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆ ಪ್ರವಾಸಿಗರ ಮೇಲೆ ದಾಳಿ ನಡೆಸಿದೆ.

ನಾಯಿ ದಾಳಿಯಿಂದ ಐವರು ಪ್ರವಾಸಿಗರು ಗಾಯಗೊಂಡಿದ್ದಾರೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಹುಚ್ಚು ನಾಯಿಯನ್ನು ಸ್ಥಳದಿಂದ ಓಡಿಸಿದ್ದಾರೆ. ಘಟನೆಯಿಂದ ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ