ಕೆಡಿಪಿ ಸಭೆಯಲ್ಲಿ ಲವ್ ಯೂ ಎಂದು ಚಾಟ್ ಮಾಡಿದ ಅಧಿಕಾರಿ
ಯಾಕೆ ರೂಪ ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದು ಹೇಳಿದ್ರೆ ಹೇಗೆ ನಾನು ಸಾಯಲಾ ಎಂದು ವಾಟ್ಸಪ್ ನಲ್ಲಿ ಚಾಟಿಂಗ್ ನಲ್ಲಿ ತೊಡಗಿದ್ರು. ಯಾರು ಎಲ್ಲಿ ಎಂದು ಹೇಳುತ್ತೇವೆ ಈ ಸ್ಟೋರಿ ನೊಡಿ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಕೆಡಿಪಿ ಸಭೆ ನಡೆಯುತ್ತಿತ್ತು. ಅದ್ರೆ ಸಭೆಯಲ್ಲಿ ಕುಳಿತಿದ್ದ ಅಧಿಕಾರಿಗಳಿಗೆ ಇದರ ಬಗ್ಗೆ ಗಂಭಿರತೆ ಇಲ್ಲದಂತೆ ಕಾಣುತ್ತಿತ್ತು. ಅಕ್ಷರದಾಸೋಹ ಅಧಿಕಾರಿ ದಾರುಕೇಶ್ ಲವ್ವಯೂ ಎಂದು ನೀನು ನನ್ನ ಪಾಡಿಗೆ ನನ್ನನ್ನು ಬಿಡು ಎಂದು ಹೆಳಿದ್ರೆ ನಾನೇನು ಸಾಯಲಾ ಎಂದು ವಾಟ್ಸಪ್ ನಲ್ಲಿ ಮಹಿಳೆಯರ ಜೊತೆ ಲವ್ ಯು ಎಂದು ಚಾಟ್ ಮಾಡುತ್ತಿದ್ದು ಕಂಡು ಬಂತು.
ಇನ್ನುಳಿದ ಅಧಿಕಾರಿಗಳು ನಿರಂತರವಾಗಿ ಚಾಟಿಂಗ್ ನಲ್ಲಿ ತೊಡಗಿದ್ದರು. ಇದು ಪದೇ ಪದೆ ನಡೆಯುತ್ತಿದ್ದರು ಕೂಡ ಸಂಬಂಧಪಟ್ಟವರು ಮಾತ್ರ ಕ್ರಮಕ್ಕೆ ಮುಂದಾಗದೆ ಇರುವುದು ದುರಂತ.