ಪೋಲಿಸ್ ಅಧಿಕಾರಿಯಿಂದ ಮಹಿಳೆಗೆ ನಿಂದನೆ: ವ್ಯಾಪಕ ಆಕ್ರೋಶ

ಮಂಗಳವಾರ, 5 ಜೂನ್ 2018 (14:05 IST)
ಪೋಲಿಸ್ ಅಧಿಕಾರಿಯೋರ್ವ ಮಹಿಳೆಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ಗಲಾಟೆ ನಡೆದಿದ್ದದ ಹಿನ್ನೆಲೆಯಲ್ಲಿ ಹಾರೂಗೇರಿ ಪಿಎಸ್ ಐ ಅವರು ಸಾರ್ವಜನಿಕವಾಗಿ ಮಹಿಳೆಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವದಕ್ಕೆ ಅಲ್ಲಿನ ರೈತರು ಹಾಗೂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಹಾರೂಗೇರಿ ಪಿಎಸ್ ಐ ಮಹ್ಮಮದರಫಿಕ್. ಎಂ. ತಹಶೀಲ್ದಾರ ಎಂಬುವರೆ ನಿಂದನೆ ಮಾಡಿರುವ ಪೋಲಿಸ ಅಧಿಕಾರಿಯಾಗಿದ್ದು
ಸಾರ್ವಜನಿಕರಲ್ಲಿ ಶಾಂತಿ ಮೂಡಿಸಬೇಕಾದ ಪೋಲಿಸ ಅಧಿಕಾರಿ ಒಂದು ಸಮುದಾಯದ ಮಹಿಳೆಯರಿಗೆ ಬಜಾರಿ,ಗಂಡಬೀರಿ ಎಂದು ಕಟು ಶಬ್ದಗಳಲ್ಲಿ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
 
ಮಹಿಳೆಯರ ನಿಂದನೆ ಮಾಡಿರುವ ಅಧಿಕಾರಿ ವಿರುದ್ದ ಕ್ರಮ ಜರಗಿಸುವಂತೆ ಕುಡಚಿ ಶಾಸಕ ಪಿ ರಾಜೀವ್ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ