ಬನ್ನೇರುಘಟ್ಟದಲ್ಲಿ ಚಿರತೆ ಹಾವಳಿ ಆಯ್ತು , ಈಗ ಕರಡಿಯ ಸರದಿ

ಬುಧವಾರ, 14 ಡಿಸೆಂಬರ್ 2022 (20:50 IST)
ಬನ್ನೇರುಘಟ್ಟದಲ್ಲಿ ಚಿರತೆ ಹಾವಳಿ ಆಯ್ತು , ಈಗ ಕರಡಿಯ ಸರದಿಯಾಗಿದೆ.ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.ಬನ್ನೇರುಘಟ್ಟ ಸಮೀಪದ ಜಿಗಣಿ ಹಾಗೂ ಕಲ್ಲುಬಾಳು ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿದೆ.
 
ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಕಲ್ಲುಬಾಳು ಜಿಗಣಿಯ ನಂದನವನ ಲೇಔಟ್, ಕಲ್ಲುಬಾಳು ಗ್ರಾಮದ ದೇವಾಲಯದ ಬಳಿ ಕರಡಿ ಓಡಾಟ ಇತ್ತು.ನಿನ್ನೆ ರಾತ್ರಿ 7 ಗಂಟೆಯ ಸುಮಾರಿಗೆ ಕಲ್ಲುಬಾಳು ಗ್ರಾಮದ ದೇವಾಲಯದ ಬಳಿ ಕರಡಿ ಓಡಾಟ ವಿತ್ತು.ಕರಡಿ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮರಾ ಹಾಗೂ ಮೊಬೈಲ್ ನಲ್ಲಿ ಸೆರೆಯಾಗಿದೆ.ಕಳೆದ ಮೂರ್ನಾಲ್ಕು ದಿನಗಳಿಂದ ಕರಡಿ ಕಾಣಿಸಿಕೊಳ್ಳುತ್ತಿದೆ‌.ಬನ್ನೇರುಘಟ್ಟ ಕಾಡಂಚಿನ ಗ್ರಾಮಗಳಲ್ಲಿ  ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ.ಕಳೆದ ನಾಲ್ಕೈದು ದಿನಗಳ ಹಿಂದೆ ಭೂತಾನಹಳ್ಳಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು.ಇದೀಗ ಕರಡಿ ಪ್ರತ್ಯಕ್ಷಗೊಂಡಿದ್ದು ಜನ ಭಯಭೀತರಾಗಿದ್ದಾರೆ.
 
ಕತ್ತಲಾಗುತ್ತಿದ್ದಂತೆ ಗ್ರಾಮಗಳಿಗೆ ಎಂಟ್ರಿ ಕೊಡುತ್ತಿರುವ ಚಿರತೆ ಹಾಗೂ ಕರಡಿ.ಕಾಡು ಪ್ರಾಣಿಗಳ ಹಾವಳಿಗೆ ಜನರು ಹೈರಾಣಗಿದ್ದಾರೆ.ಸ್ಥಳದಲ್ಲಿಯೇ ಅರಣ್ಯ ಇಲಾಖೆ ಸಿಬ್ಬಂದಿಗಳು ಬೀಡುಬಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ