ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಘ ಪರಿವಾರ ಅಶ್ವಥ್ ನಾರಾಯಣ್ ಹೆಸರು ಪ್ರಸ್ತಾಪ ಮಾಡಿರುವ ವಿಚಾರವಾಗಿ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯಿಸಿದ್ದು,ಇನ್ನೂ ಅಧ್ಯಕ್ಷರು ಇದಾರೆ,ಯಾವುದೇ ಘೋಷಣೆ ಆಗಿಲ್ಲ.ಪಕ್ಷದಲ್ಲಿ ಯಾರನ್ನೂ ನಿಶ್ಚಿಯ ಮಾಡ್ತಾರೆ ಅವರನ್ನು ಒಪ್ಪಿಕೊಳ್ಳುತ್ತೇವೆ.ಇವ್ರು ಅವ್ರು ಅಂತ ಏನಿಲ್ಲ.ಪಕ್ಷದಲ್ಲಿ ಯಾರಿಗೂ ಕೊಟ್ಟರು ಜವಾಬ್ದಾರಿ ನಿರ್ವಹಿಸುತ್ತಾರೆ.ಪಕ್ಷ ನಿಶ್ಚಯ ಮಾಡಬೇಕು ಅಷ್ಟೇ,ಈಗಾಗಲೇ ಅಧ್ಯಕ್ಷರು ಇದಾರೆ.ಇದರ ಬಗ್ಗೆ ಹೆಚ್ಚಾಗಿ ಮಾತಾಡಿದ್ರೆ ತಪ್ಪಾಗುತ್ತದೆ ಅಂತಾ ಅಶ್ವಥ್ ನಾರಾಯಣ ಹೇಳಿದ್ದಾರೆ.
ಅಲ್ಲದೇ ಈ ವೇಳೆ ರೈತರ ಸಂಕಷ್ಟದ ಸಮಯದಲ್ಲಿ ಬಿಜೆಪಿ ಸೈಲೆಂಟ್ ಆಗಿರುವ ವಿಚಾರವಾಗಿ ಅಶ್ವಥ್ ನಾರಾಯಣ್ ನಾಳೆ ಇಡೀ ರಾಜ್ಯಾದ್ಯಂತ ಇಡೀ ರೈತ ಮೋರ್ಚಾದವರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಹೇಳಿದ್ರು.ರೈತ ವಿರೋದಿ ಬಜೆಟ್ ಕೊಟ್ಟಿರುವುದು, ರೈತರ ಆತ್ಮಹತ್ಯೆ ಹಾಗೂ ಅತಿವೃಷ್ಟಿ ವಿಚಾರವನ್ನು ಈಗಾಗಲೇ ನಾವು ಸದನದಲ್ಲಿ ಪ್ರಬಲವಾಗಿ ಕೈಗೆತ್ತಿಕೊಂಡಿದ್ದೇವೆ.ಪ್ರತಿಯೊಬ್ಬರ ಮನೆಗೂ ಹೋಗ್ತೀವಿ.ರೈತ ಮೋರ್ಚಾವತಿಯಿಂದ ಎಲ್ಲಾ ಕಡೆ ಪ್ರತಿಭಟನೆ ಮಾಡುತ್ತೇವೆ.ರೈತರ ಪರವಾಗಿ ಇರುವಂತೆ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ.ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಶೀಘ್ರದಲ್ಲೇ ನಮ್ಮ ನಾಯಕರು ಭೇಟಿ ಕೊಡ್ತಾರೆ ಅಂತಾ ಅಶ್ವಥ್ ನಾರಾಯಣ ಹೇಳಿದ್ದಾರೆ.