ಮಾಸ್ಕ್ ವಿಚಾರದಲ್ಲಿ ಬಿಬಿಎಂಪಿ ಟಫ್ ರೂಲ್ಸ್ ಗೆ ಸಾರ್ವಜನಿಕರು ಕಿಡಿ

ಬುಧವಾರ, 28 ಅಕ್ಟೋಬರ್ 2020 (12:46 IST)
ಬೆಂಗಳೂರು : ಮಾಸ್ಕ್ ವಿಚಾರದಲ್ಲಿ ಬಿಬಿಎಂಪಿ ಟಫ್ ರೂಲ್ಸ್ ವಿರುದ್ಧ ಬೆಂಗಳೂರಿನ ಜನರು ಆಕ್ರೋಶಗೊಂಡಿದ್ದಾರೆ.

ಬೈಕ್, ಕಾರಲ್ಲಿ ಒಬ್ಬರೇ ಇದ್ರೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ ಹಿನ್ನಲೆಯಲ್ಲಿ ಕಿಡಿಕಾರಿದ ಜನರು,  ಡ್ರೈವರ್ ಒಬ್ಬರೇ ಇದ್ದಾಗಲೂ ಮಾಸ್ಕ್ ಬೇಕೆ? ಇದು ಬಿಬಿಎಂಪಿ ಸುಲಿಗೆ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಕಾರಿನಲ್ಲಿ ಡ್ರೈವರ್ ಒಬ್ಬರೇ ಇದ್ದಾಗ ಮಾಸ್ಕ್ ಧರಿಸಬೇಕಿಲ್ಲ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡುತ್ತೇನೆ. ಮಾಸ್ಕ್ ನಿಯಮದ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ