ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಲು ಸಮುದ್ರದಲ್ಲಿ ಸಿಗುವ ಈ ವಸ್ತುವನ್ನು ಹಚ್ಚಿ
ಬುಧವಾರ, 28 ಅಕ್ಟೋಬರ್ 2020 (10:02 IST)
ಬೆಂಗಳೂರು : ಕೆಲವರು ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ. ಈ ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ.
ಸಮುದ್ರದ ಉಪ್ಪು ನಿಮ್ಮ ನೆತ್ತಿಯ ಮೇಲಿರುವ ತಲೆಹೊಟ್ಟನ್ನು ಮತ್ತು ಗುಳ್ಳೆಗಳನ್ನು ನಿವಾರಿಸುವಂತಹ ಅಗತ್ಯವಾದ ಖನಿಜಗಳಿಂದ ಕೂಡಿದೆ. ಆದಕಾರಣ ಸಮುದ್ರದ ಉಪ್ಪನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ ನಿಮ್ಮ ಕೈಗಳ ಸಹಾಯದಿಂದ ತಲೆ ಹಚ್ಚಿ ಮಸಾಜ್ ಮಾಡಿ. ಬಳಿಕ ಶಾಂಪು ಮತ್ತು ಕಂಡೀಷನರ್ ಬಳಸಿ ಸ್ನಾನ ಮಾಡಿ. ಇದರಿಂದ ತಲೆಹೊಟ್ಟು ನಿವಾರಣೆಯಾಗಿ ತುರಿಕೆ ಕಡಿಮೆಯಾಗುತ್ತದೆ.