ಜನರ ಜೀವಭಯಕ್ಕೆ ಕಾರಣವಾಗಿದ್ದು ಸಿಕ್ಕೇ ಬಿಟ್ಟಿತು!

ಸೋಮವಾರ, 3 ಜೂನ್ 2019 (19:14 IST)
ಜನರಲ್ಲಿ ಜೀವ ಭಯಕ್ಕೆ ಕಾರಣವಾಗಿದ್ದದ್ದು ಕೊನೆಗೂ ಸಿಕ್ಕೇ ಬಿಟ್ಟಿತು.

ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಗಂಡು ಚಿರತೆ ಬೋನಿನಲ್ಲಿ ಕೊನೆಗೂ ಬಂಧಿಯಾಗಿದೆ.
ಹೆಚ್.ಡಿ.ಕೋಟೆ ತಾಲೂಕಿನ ಹಾರೂಪುರ ಗ್ರಾಮದ ಆಸುಪಾಸಿನಲ್ಲಿ ಪ್ರತ್ಯಕ್ಷಗೊಂಡು‌ ಜನ- ಜಾನುವಾರುಗಳಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆಯಾಗಿದೆ.

ಗ್ರಾಮಸ್ಥರ ಮನವಿ ಆಲಿಸಿ ಕಳೆದ 4ದಿನಗಳ ಹಿಂದೆ ರಾಮಕೃಷ್ಣ ಅವರ ಜಮೀನಿನಲ್ಲಿ ಬೋನು ಇರಿಸಲಾಗಿತ್ತು. 5 ವರ್ಷದ ಗಂಡು ಚಿರತೆ ಸೆರೆಸಿಕ್ಕಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿ ಚಿರತೆ ಸ್ಥಳಾಂತರಿಸಿದ್ದಾರೆ ಅರಣ್ಯ ಇಲಾಖೆ ಸಿಬ್ಭಂದಿ.

ಸೆರೆಸಿಕ್ಕ ಚಿರತೆ ಜನರನ್ನು ಕಂಡು ಭಯಭೀತವಾಗಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ತಲೆಗೆ ತೀವ್ರಸ್ವರೂಪದ ಗಾಯ ಮಾಡಿಕೊಂಡಿದೆ. ಚಿರತೆಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ