ಗ್ರಾಹಕರಿಗೆ ಮತ್ತೇ ಹೊಸ ಟೆನ್ಷನ್ ಶುರುವಾಗಿದೆ.ಈಗಷ್ಟೆ ಜನರು ಟೊಮ್ಯಾಟೋ ಬೆಲೆ ಇಳಿತಪ್ಪ ಅಂತಾ ನಿಟ್ಟುಸಿರು ಬಿಟ್ಟಿದ್ರು. ಆದ್ರೆ ಇದೀಗ ಮತ್ತೊಂದು ಹೊಸ ಟೆನ್ಷನ್ ಸ್ಟಾರ್ಟ್ ಆಗಿದೆ. ಈಗ ಈರುಳ್ಳಿ ರೇಟ್ ಗ್ರಾಹಕರಿಗೆ ಕಣ್ಣೀರು ತರಿಸಲು ರೆಡಿಯಾದಂತೆ ಕಾಣುತ್ತಿದೆ. ಟೊಮೆಟೊ ಬಾತ್ ಎಂಟ್ರಿ ಕೊಡುತ್ತಿದ್ದಂತೆ.. ಈರುಳ್ಳಿ ದೋಸೆ ಮಾಯವಾಗ್ತಿದೆ.
ಕೆಜಿಗೆ 15-25 ರೂ. ಇದ್ದ ಈರುಳ್ಳಿ ಈಗ 60 ರೂ.ಗೆ ಏರಿಕೆಯಾಗಿದೆ. ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗಬಹುದು. ಈರುಳ್ಳಿ ಬೆಲೆ ದಿಢೀರ್ ಏರಿಕೆ ಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರಲಿದೆ. ಕಳೆದ ಕೆಲ ತಿಂಗಳಿಂದ ಟೊಮೇಟೊ ಬೆಲೆ ಜನ ಸಾಮಾನ್ಯರನ್ನು ಗೋಳಾಡಿಸಿದೆ. ಇದೀಗ ಈರುಳ್ಳಿಯೂ ದುಬಾರಿ ಆಗಿದೆ. 5 ಕೆಜಿ ಗೆ 100 ರೂಪಾಯಿ ಇದ್ದ ಈರುಳ್ಳಿ ಇದೀಗ ಡಬಲ್ ಆಗಿದೆ. ಟೊಮೇಟೊ ಬೆಲೆ ಏರಿಕೆ ಕಂಡು ಜನರು ತರಕಾರಿಗೆ ಟೊಮೆಟೊ ಹಾಕೊದನ್ನೆ ಸ್ಟಾಪ್ ಮಾಡಿದ್ರು. ಆದರೆ, ಈಗ ಜನರ ಈ ಕಷ್ಟಗಳು ಇನ್ನಷ್ಟು ಹೆಚ್ಚಾಗಲಿವೆ. ಮುಂಬರುವ ಕೆಲವೇ ದಿನಗಳಲ್ಲಿ ಈರುಳ್ಳಿ ಬೆಲೆಯೂ ಆಕಾಶ ಮುಟ್ಟಲಿದೆ.