ಮೈತ್ರಿ ಸರಕಾರಕ್ಕೆ ಶಾಕ್ ನೀಡಿದ ಮತ್ತೊರ್ವ ಸಚಿವರ ರಾಜೀನಾಮೆ?

ಶುಕ್ರವಾರ, 5 ಜುಲೈ 2019 (19:49 IST)
ಮೈತ್ರಿ ಸರಕಾರದಲ್ಲಿ ಕೈ ಪಡೆಯ ಶಾಸಕರು ರಾಜೀನಾಮೆ ನೀಡುತ್ತಿರುವಂತೆ ಸಚಿವರೊಬ್ಬರು ತಾವೂ ರಾಜೀನಾಮೆ ನೀಡೋದಾಗಿ ಹೇಳುವ ಮೂಲಕ ಚರ್ಚೆಗೆ ಬಂದಿದ್ದಾರೆ.

ಆಗಸ್ಟ್ 10 ರೊಳಗಾಗಿ ವಿವಿ ಸಾಗರಕ್ಕೆ ನೀರು ಹರಿಸದಿದ್ದರೆ ರಾಜೀನಾಮೆಯೇ ನೀಡಿಯೇ ಸಿದ್ಧ. ಹೀಗಂತ ತುಂಬಿದ ಸಭೆಯಲ್ಲಿ ಬಹಿರಂಗವಾಗಿ ರಾಜೀನಾಮೆ ಕುರಿತು ಮಾತಾಡಿದ್ದಾರೆ‌ ಸಚಿವರೊಬ್ಬರು.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಈ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಹೇಳಿಕೆ ನೀಡಿರುವ ಸಚಿವರು, ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಮುಗಿಸಲು ಆಗ್ರಹಿಸಿ ಕೈಗೊಂಡಿದ್ದ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ರು.

ಹಿರಿಯೂರು ವಕೀಲರ ಸಂಘದಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ನೀರು ಹರಿಸದಿದ್ದರೆ ರಾಜಿನಾಮೆ ನೀಡುವುದಾಗಿ ವಾಗ್ದಾನ ಮಾಡಿದ್ರು.

ಜುಲೈ 30 ರ ವೇಳೆಗೆ ಮಳೆ ಆಗುತ್ತೆ. ಆ ನಂತರ ವಾಣಿ ವಿಲಾಸ ಸಾಗರಕ್ಕೆ ನೀರು ಬರುತ್ತೆ. ಆಗಸ್ಟ್ 10 ರ‌ ಒಳಗಾಗಿ ‌ನೀರು ಬರದಿದ್ದರೆ‌ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೋಗುತ್ತೇನೆ. ನನ್ನ ಮಾತು ತಪ್ಪುವುದಿಲ್ಲ. ನಾನು ಕೂಡಾ ರೈತನ ಮಗ ಎಂದ ವೆಂಕಟರಮಣಪ್ಪ ಹೇಳಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ