ಪ್ರಧಾನಿ ಮೋದಿ ಸ್ವಾಮಿ ವಿವೇಕಾನಂದರ ಎರಡನೇ ರೂಪ - ಉಮೇಶ್ ಜಾಧವ್
ಭಾನುವಾರ, 5 ಮೇ 2019 (11:43 IST)
ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಸ್ವಾಮಿ ವಿವೇಕಾನಂದರ ಎರಡನೇ ರೂಪ ಎಂದು ಡಾ.ಉಮೇಶ್ ಜಾಧವ್ ಹಾಡಿಹೊಗಳಿದ್ದಾರೆ.
ಚಿಂಚೋಳಿಯ ಹಾಲಕೋಡು ಮಠದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವೇಕಾನಂದರು ನಮ್ಮ ದೇಶದ ಸಂಸ್ಕತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದರು. ಮೋದಿಯವರು ಈ ಶತಮಾನದಲ್ಲಿ ಸ್ವಾಮಿ ವಿವೇಕಾನಂದರ ರೂಪದಲ್ಲಿ ಜನಿಸಿ ನಮ್ಮ ದೇಶವನ್ನು ವಿಶ್ವದಲ್ಲಿ ತಲೆ ಎತ್ತುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ಕಾಂಗ್ರೆಸ್ ಪಕ್ಷ ಬಿಡಲು ಕಾರಣವೆನೆಂಬುದನ್ನು ತಿಳಿಸುತ್ತಾ, ನಾನು ನನ್ನ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಬಿಟ್ಟಿಲ್ಲ. ನನ್ನ ಕ್ಷೇತ್ರದ ಜನರಿಗಾಗಿ ಪಕ್ಷದ ಬಿಟ್ಟಿದ್ದೇನೆ. ನಾನು ನಮ್ಮ ಕ್ಷೇತ್ರದಲ್ಲಿರುವ ಸಕ್ಕರೆ ಕಾರ್ಖಾನೆಯನ್ನು ಮರು ಆರಂಭಿಸಲು ಹಾಗೂ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ದಿವಂಗತರಾದಾಗ ಸಚಿವ ಪ್ರಿಯಾಂಕ್ ಖರ್ಗೆ ಸ್ಟಾರ್ ಹೋಟೆಲ್ ನಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಸಿ ಪಕ್ಷಕ್ಕೆ ಅವಮಾನ ಮಾಡಿದ್ದರು. ಹೀಗಾಗಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾ ಮಾಡುವಂತೆ ಕೇಳಿದ್ದೆ. ಆದರೆ ನಮ್ಮ ಪಕ್ಷದ ಮುಖಂಡರು ನನ್ನ ಎರಡು ಬೇಡಿಕೆಗಳನ್ನು ಈಡೇರಿಸಲಿಲ್ಲ. ಇದಕ್ಕಾಗಿ ನಾನು ಪಕ್ಷ ಬಿಟ್ಟೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.