ಗರ್ಭಿಣಿ ಪತ್ನಿಯನ್ನ ಕೊಂದ ಪಾಪಿ ಪತಿ
ಗರ್ಭಿಣಿ ಹೆಂಡತಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಪ್ರಕರಣ ಸಂಬಂಧ ಆರೋಪಿ ಪತಿ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡಿನ ಚಾಮಲಾಪುರದಲ್ಲಿ ನಿನ್ನೆ ಶೋಭಾ ಎಂಬಾಕೆಯನ್ನು ಕೊಲೆ ಮಾಡಲಾಗಿತ್ತು. ಮಂಜುನಾಥ್ ಹಾಗೂ ಶೋಭಾ ಪ್ರೀತಿಸಿ ಮದುವೆಯಾಗಿದ್ದರು. ನಿನ್ನೆ ಮನೆಯಲ್ಲಿ ಕುಳಿತು ಮಾತನಾಡುವಾಗ ಜಗಳ ನಡೆದಿದೆ. ಈ ವೇಳೆ ಹರಿತವಾದ ಬ್ಲೇಡ್ನಿಂದ ಶೋಭಾಳ ಕತ್ತು ಕೊಯ್ದು ಮಂಜುನಾಥ್ ಕೊಲೆ ಮಾಡಿದ್ದ. ಘಟನೆ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.