ಹಣ ಕೊಡದಿದ್ದಕ್ಕೆ ಮಾವನ ಖಾಸಗಿ ಅಂಗ ಕತ್ತರಿಸಿದ ಸೊಸೆ!

ಭಾನುವಾರ, 10 ಸೆಪ್ಟಂಬರ್ 2023 (10:08 IST)
ಗಾಂಧಿನಗರ : ವಿದೇಶಕ್ಕೆ ತೆರಳಲು 2 ಲಕ್ಷ ರೂ. ನೀಡಲು ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಮಾವನ ಖಾಸಗಿ ಅಂಗವನ್ನೇ ಕತ್ತರಿಸಿ ಕೊಲೆಗೈದ ಪ್ರಕರಣ ಗುಜರಾತ್ನ ಖೇಡಾದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಜಗದೀಶ್ ಶರ್ಮಾ (75) ಎಂದು ಗುರುತಿಸಲಾಗಿದೆ. ಆರೋಪಿ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ವಿಚಾರಣೆ ವೇಳೆ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ತನಿಖೆ ವೇಳೆ ಆಕೆಯ ಮಾವ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ. ಇದಕ್ಕಾಗಿ ಹಣ ನೀಡುತ್ತಿದ್ದ ಎಂದು ಮಹಿಳೆ ಹೇಳಿದ್ದಾಳೆ.

ಬಳಿಕ ತಾನು ಫೇಸ್ಬುಕ್ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ ವಿದೇಶಕ್ಕೆ ತೆರಳಲು ಬಯಸಿದ್ದೆ. ಇದಕ್ಕಾಗಿ ಮಾವನ ಬಳಿ ಹಣ ಕೇಳಿದ್ದೆ. ಆದರೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾಗಿ ಮಹಿಳೆ ಹೇಳಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ