ತನ್ನ ಸ್ವಾರ್ಥಕ್ಕೆ 14 ತಿಂಗಳ ಮಗುವನ್ನೇ ಕೊಂದ ತಂದೆ!?

ಶನಿವಾರ, 9 ಸೆಪ್ಟಂಬರ್ 2023 (10:03 IST)
ರಾಯಚೂರು : 2ನೇ ಮದುವೆಗೆ ಮಗು ಅಡ್ಡಿಯಾಗುತ್ತದೆ ಎಂದು ಪಾಪಿ ತಂದೆಯೊಬ್ಬ 14 ತಿಂಗಳ ತನ್ನ ಹಸುಗೂಸನ್ನು ಕೊಂದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದಲ್ಲಿ ನಡೆದಿದೆ.
 
14 ತಿಂಗಳ ಅಭಿನವ್ ಪಾಪಿ ತಂದೆಯ ಕೈಯಲ್ಲೇ ಪ್ರಾಣ ಬಿಟ್ಟ ನತದೃಷ್ಟ ಮಗು. ತನ್ನ ಮಗುವನ್ನೇ ಕೊಂದು 3 ದಿನ ಕಲ್ಲಿನ ಅಡಿಯಲ್ಲಿ ಮುಚ್ಚಿಟ್ಟ ಪಾಪಿ ತಂದೆ ಮಹಾಂತೇಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಮದುವೆಯಾಗುವ ಆಸೆಯಿಂದ ಮಗುವನ್ನು ಕೊಂದು ಕಲ್ಲಿನ ಅಡಿಯಲ್ಲಿ 3 ದಿನ ಮುಚ್ಚಿಟ್ಟಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಪರ ಪುರುಷನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ಹೊಂದಿದ್ದ ಮಹಾಂತೇಶ್ ಮತ್ತೊಂದು ಮದುವೆಗೆ ತಯಾರಿ ನಡೆಸಿದ್ದ. ಮರು ಮದುವೆಗೆ ಮಗು ಅಡ್ಡಿಯಾಗುತ್ತದೆ ಎಂದು ಕೊಲೆ ಮಾಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ