ಹಣಕ್ಕಾಗಿ ಪತ್ನಿಯನ್ನೇ ಕೊಂದ ಪಾಪಿ!

ಮಂಗಳವಾರ, 7 ಡಿಸೆಂಬರ್ 2021 (09:01 IST)
ರಾಯಚೂರು : ಪತ್ನಿ ತಂದೆಯ ನಿವೃತ್ತಿ ಹಣಕ್ಕಾಗಿ ಕಿರುಕುಳ ಮಾಡಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಅಂದ್ರೂನ್ಕಿಲ್ಲಾದಲ್ಲಿ ನಡೆದಿದೆ.
ಆಸ್ಮಾ ಬಾನು ( 30) ಸಾವನ್ನಪ್ಪಿರುವ ಮಹಿಳೆ. ಪತಿ ಫಸಲುದ್ದೀನ್ ಹಾಗೂ ಮನೆಯವರು ಹಣಕ್ಕಾಗಿ ಕಿರುಕುಳ ನೀಡಿ ಕೊಲೆ ಮಾಡಿರುವ ಬಗ್ಗೆ ಆರೋಪಿಸಲಾಗಿದೆ. ಮೃತಳ ತಾಯಿ ಹಾಗೂ ಸಂಬಂಧಿಕರು ಗಂಡನ ಮನೆಯವರ ವಿರುದ್ದ ಆರೋಪಿಸಿದ್ದಾರೆ.
ಹಣಕ್ಕಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಕೊಲೆ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿ ಫಸಲುದ್ದೀನ್ ನನ್ನ  ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರೆದಿದೆ.  ಘಟನೆ ಹಿನ್ನೆಲೆ ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ